Friday, January 24, 2025
ಸುದ್ದಿ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಮೂಹಿಕ ಹುಟ್ಟುಹಬ್ಬ- ಕಹಳೆ ನ್ಯೂಸ್

ವಿದ್ಯಾಗಮ – ಸಾಮೂಹಿಕ ಹುಟ್ಟುಹಬ್ಬ ಇಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಘೃತಾಹುತಿ ಮಾಡುವುದರ ಮೂಲಕ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.

 

ಜಾಹೀರಾತು
ಜಾಹೀರಾತು
ಜಾಹೀರಾತು

        

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾಗಿರುವ ಚೆನ್ನಪ್ಪ ಆರ್ ಕೋಟ್ಯಾನ್ ಮಾತನಾಡಿ “ಶಿಕ್ಷಣ ಮತ್ತು ಸಂಸ್ಕಾರ ಎರಡನ್ನೂ ರೂಪಿಸಿಕೊಂಡು ಹೋಗುತ್ತಿರುವ ಶ್ರೀರಾಮ ಸಂಸ್ಥೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗದೆ ,ಭಾರತಮಾತೆಗೆ ಪುಷ್ಪಾರ್ಚನೆಗೈದು ನಿಧಿ ಸಮರ್ಪಿಸಿ ಭಾರತೀಯ ಸಂಸ್ಕೃತಿಯ0ತೆ ಅಗ್ನಿಹೋತ್ರಕ್ಕೆ ಘೃತಾಹುತಿಯನ್ನು ಮಾಡಿ ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸುವುದು ನಮ್ಮ ಧರ್ಮ. ಅಂತಹ ಆಚರಣೆಗಳನ್ನು ನಮ್ಮಲ್ಲಿ ಆಚರಿಸಿರುವುದು ನಮ್ಮ ಪರಂಪರೆಯನ್ನು ಮತ್ತೆ ನೆನಪಿಸಿದಂತೆ.” ಎಂದು ಹೇಳಿದರು.

ಅತಿಥಿಗಳಿಗೆ ಹೂಗುಚ್ಛ ನೀಡಿ ಸಾಂಕೇತಿಕವಾಗಿ ಸ್ವಾಗತಿಸಲಾಯಿತು. 6ನೇ ತರಗತಿಯ ಮನ್ವಿತ ಪ್ರೇರಣಾ ಗೀತೆ ಹಾಡಿದಳು. ಅಧ್ಯಾಪಕ ವೃಂದದವರು ಹುಟ್ಟುಹಬ್ಬ ಆಚರಿಸುವ ವಿದ್ಯಾರ್ಥಿಗಳಿಗೆ ಆರತಿ, ಅಕ್ಷತೆ ಹಾಗೂ ತಿಲಕಧಾರಣೆ ಮಾಡಿ ಸಿಹಿನೀಡಿದರು.

ವೇದಿಕೆಯಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಪರಿವೀಕ್ಷಕರು ಹಾಗೂ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾಗಿರುವ ಮಲ್ಲಿಕಾ ಶೆಟ್ಟಿ, ಬಾಳ್ತಿಲ ಗ್ರಾಮ ಪಂಚಾಯತ್ನ ಸದಸ್ಯರಾಗಿರುವ ವಿಠಲ್ ನಾಯಕ್, ಹಿರಣ್ಮಯಿ ಮತ್ತು ಶೋಭಕುಮಾರಿ, ಪುತ್ತೂರು ಮಂಡಲದ ಬಿಜೆಪಿ ರೈತಮೋರ್ಚದ ಪ್ರಧಾನ ಕಾರ್ಯದರ್ಶಿ, ವಿಟ್ಲಮುಡ್ನೂರು ಗ್ರಾಮ ಪಂಚಾಯತ್ನ ನೂತನ ಸದಸ್ಯರು ಪುನೀತ್ ಮಾಡತ್ತಾರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಚಂದ್ರಶೇಖರ ಸಾಲ್ಯಾನ್, ಮಂಗಳೂರು ಎನ್.ಎಮ್.ಪಿ.ಟಿ ಉದ್ಯೋಗಿಯಾಗಿರುವ ಗಣೇಶ್ ಹಾಗೂ ಮುಖ್ಯೋಪಾಧ್ಯಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.