ನೆಲ್ಯಾಡಿ: ಇಂದು ನವದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ, ಸೀನಿಯರ್ ಕೆಡೆಟ್ ಅಂಡರ್ ಆಫೀಸರ್ ಆಗಿರುವ ಮತ್ತು ಗ್ರಾಮೀಣ ಪ್ರದೇಶವಾದ ಕಡಬ ತಾಲೂಕಿನ ನೆಲ್ಯಾಡಿಯ ನಿವಾಸಿ ಉದ್ಯಮಿ ರಮೇಶ್ ಹಾಗೂ ಕಾಂಗ್ರೆಸ್ ನಾಯಕಿ , ಪುತ್ತೂರು ತಾಲೂಕು ಪಂಚಾಯತ್ ಸದಸ್ಯೆ ಉಷಾ ಅಂಚನ್ ರವರ ಪುತ್ರಿ, ಕುಮಾರಿ ರಕ್ಷಾ ಅಂಚನ್ ಪರೇಡ್‍ನಲ್ಲಿ ಭಾಗವಹಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಫಿಲೋಮಿನಾ ಕಾಲೇಜಿನಿಂದ ಆರು ಮಂದಿ ವಿದ್ಯಾರ್ಥಿಗಳು ಹಾಗೂ ಎನ್‍ಸಿಸಿ ಅಧಿಕಾರಿ ಸೇರಿದಂತೆ ಏಳು ಮಂದಿ ಪ್ರತಿಷ್ಠಿತ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ವರ್ಷ 2020-21ನೇ ಸಾಲಿನಲ್ಲಿ ರಕ್ಷಾ ಅಂಚನ್ ಮಾತ್ರ ಆಯ್ಕೆಯಾಗಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಪರೇಡ್ ಗೆ ಆಯ್ಕೆಯಾದ ಏಕಮಾತ್ರ ವಿದ್ಯಾರ್ಥಿನಿ ಕುಮಾರಿ ರಕ್ಷಾ ಆಗಿದ್ರು. ಹುಡುಗಿಯರ ವಿಭಾಗದಿಂದ ರಕ್ಷಾ ಅಂಚನ್ ನವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸುವ ಏಕೈಕ ವಿದ್ಯಾರ್ಥಿನಿಯಾಗಿದರು. ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ತಂಡದ ನಾಯಕಿಯಾಗಿ ಕುಮಾರಿ ರಕ್ಷಾ ಅಂಚನ್ ರವರು ಮುಂಚೂಣಿಯಲ್ಲಿ ಕಾಣಿಸಿಕೊಂಡರು, ಇಂದು ನಡೆದ ಭಾರತದ ಪ್ರಧಾನ ಮಂತ್ರಿ, ರಾಷ್ಟ್ರಪತಿ ಭಾಗವಹಿಸಿದ ಪರೇಡ್ ನಲ್ಲಿ ಕಾಣಿಸಿಕೊಳ್ಳುವ ಸುವರ್ಣ ಅವಕಾಶವನ್ನು ಪಡೆದ ರಕ್ಷಾ ಅಂಚನ್ ಅವರನ್ನು, ದೂರದರ್ಶನ ಮೂಲಕ ವೀಕ್ಷಿಸಿ ಮನೆ ಮಂದಿ ಸಂಭ್ರಮ ಪಟ್ಟಿದ್ದಾರೆ. ಕೊರೊನಾ ಮಹಾಮಾರಿಯ ನಡುವೆಯು ರಕ್ಷಾ ಅಂಚನ್ ಧೃತಿಗೆಡದೆ ಹೆತ್ತವರ ಪ್ರೋತ್ಸಾಹದಿಂದ ಪ್ರತಿಷ್ಠಿತ ಪೆರೇಡಿನಲ್ಲಿ ಭಾಗವಹಿಸಿದ್ದಾರೆ.