Friday, January 24, 2025
ಪುತ್ತೂರು

ದೇಶಕ್ಕಾಗಿ ನಾವು ಬದುಕುವುದನ್ನು ಕಲಿಯಬೇಕು; ಅಚ್ಯುತ್ ನಾಯಕ್-ಕಹಳೆ ನ್ಯೂಸ್

ಪುತ್ತೂರು : ಇಂಗ್ಲೀಷರು, ಡಚ್ಚರು, ಫ್ರೆಂಚರು, ಹೂಣರು ಹೀಗೆ ಅನೇಕ ಪರದೇಶೀಯರು ನಮ್ಮ ದೇಶದ ಮೇಲೆ ದಾಳಿ ಮಾಡಿದ್ದರು. ನಿರಂತರವಾಗಿ ಹೋರಾಟ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾವು ಭಾರತೀಯರು ನಮ್ಮ ದೇಶಕ್ಕೆ ಆಕ್ರಮಣ ಮಾಡಿದ, ಕೇಡು ಬಯಸಿದವರನ್ನು ಒಂದು ದಿನಕ್ಕೂ ನೆಮ್ಮದಿಯಿಂದಿರಲು ಬಿಟ್ಟಿಲ್ಲ. ಅಂತಿಮವಾಗಿ 1947ರಲ್ಲಿ ಭಾರತ ಸ್ವತಂತ್ರ ದೇಶವಾಯಿತು. 1950ರಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡು ಗಣರಾಜ್ಯವಾಯಿತು. ನಮಗೆ ಸಿಕ್ಕ ಈ ಸ್ವಾತಂತ್ರ್ಯ ಸಾವಿರಾರು ದೇಶಪ್ರೇಮಿಗಳ ಬಲಿದಾನದ ಫಲ. ಅದನ್ನ ಉಳಿಸುವುದು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ.ಇಂದು ವಿಶ್ವದ ಇತರ ದೇಶಗಳಿಗೆ ಸಹಾಯ ಹಸ್ತವನ್ನು ಚಾಚುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಇಡೀ ಜಗತ್ತಿಗೆ ಭಾರತ ಗುರವಿನ ಸ್ಥಾನವನ್ನು ಹೊಂದುತ್ತಾ ಇದೆ ಎಂದು ಇಲ್ಲಿನ ವಿವೇಕಾನಂದ ವಸತಿ ನಿಲಯಗಳ ಕಾರ್ಯದರ್ಶಿ ಅಚ್ಯುತ್ ನಾಯಕ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ವಿವೇಕಾನಂದ ಪದವಿಪೂರ್ವ ಮಹಾವಿದ್ಯಾಲಯಗಳ ಆಶ್ರಯದಲ್ಲಿ ನಡೆದ ‘ಗಣರಾಜ್ಯ ದಿನಾಚರಣೆ’ಯಂದು ಧ್ವಜಾರೋಹಣ ನೆರವೇರಿಸಿ ಮಂಗಳವಾರ ಮಾತನಾಡಿದರು. ದೇಶಕ್ಕಾಗಿ ನಾವು ಬದುಕಬೇಕು. ಅದು ಸಣ್ಣ ಕೆಲಸವಲ್ಲ. ನಮ್ಮ ಕೆಲಸದಿಂದ ದೇಶಕ್ಕೆ ಹಾನಿಯಾಗುತ್ತದೆ, ಕೆಟ್ಟದಾಗುತ್ತದೆ, ನಷ್ಟವಾಗುತ್ತದೆ ಎಂದಾದರೆ ಅಂತಹ ಕೆಲಸವನ್ನು ನಾವು ಮಾಡಬಾರದು. ನಮಗೆ ಕಷ್ಟ ಆಗುತ್ತೆ, ದೇಶಕ್ಕೆ ಹಿತವಾಗುತ್ತೆಅಂದ್ರೆ ಅಂತಹ ಕೆಲಸಗಳನ್ನು ಮಾಡಬೇಕು.

ಹಕ್ಕುಗಳನ್ನು ಅನುಭವಿಸುವುದಕ್ಕಿಂತಲೂ ಹೆಚ್ಚಾಗಿ ದೇಶದಕುರಿತಾಗಿ ನಮ್ಮ ಜವಬ್ದಾರಿಗಳನ್ನು ನಿಷ್ಠೆಯಿಂದ ಪೂರೈಸಬೇಕು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಿವೇಕಾನಂದ ಪದವಿಪೂರ್ವ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ., ಸಂಚಾಲಕ ಸಂತೋಷ್ ಬಿ. ಸದಸ್ಯ ರವಿ ಮುಂಗ್ಳಿಮನೆ ವಿವೇಕಾನಂದ ಪದವಿ ಮಹಾವಿದ್ಯಾಲಯದ ಸಂಚಾಲಕ ಮುರಳಿಕೃಷ್ಣ ಕೆ. ಎನ್. ವಿವೇಕಾನಂದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್, ವಿವೇಕಾನಂದ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಮಹೇಶ್ ನಿಟಿಲಾಪುರ, ಕಾಲೇಜಿನ ಎನ್‍ಸಿಸಿ ಅಧಿಕಾರಿ ಅತುಲ್ ಶೆಣೈ, ಉಪನ್ಯಾಸಕ ಹಾಗೂ ಭೋದಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಎನ್‍ಎಸ್‍ಎಸ್ ಸ್ವಯಂಸೇವಕರು, ಎನ್‍ಸಿಸಿ ಕೆಡೆಟ್‍ಗಳು, ರೋವರ್ಸ್ ಹಾಗೂ ರೇಂಜರ್ಸ್ ತಂಡ, ರೆಡ್‍ಕ್ರಾಸ್ ಘಟಕದ ಸದಸ್ಯರು ಉಪಸ್ಥಿತರಿದ್ದರು. ವಿವೇಕಾನಂದ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಮನಮೋಹನ ಕಾರ್ಯಕ್ರಮ ನಿರ್ವಹಿಸಿದರು.