Sunday, November 24, 2024
ಹೆಚ್ಚಿನ ಸುದ್ದಿ

ಪ್ರಗತಿ ರೆಸಿಡೆನ್ಶಿಯಲ್ ಸ್ಟಡಿ ಸೆಂಟರ್ ನಲ್ಲಿ 72ನೇ ಪ್ರಜಾಪ್ರಭುತ್ವ ದಿನಾಚರಣೆ; ಜೀವನದಲ್ಲಿ ಒತ್ತಡ, ಟೀಕೆ, ಭ್ರಮೆಗಳಿಂದ ದೂರವಿರಿ- ವಿಠಲ ನಾಯಕ್ ಕಲ್ಲಡ್ಕ-ಕಹಳೆ ನ್ಯೂಸ್

ಪ್ರಗತಿ ವಿದ್ಯಾಸಂಸ್ಥೆಯು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯ ನೀಡುತ್ತಾ ಬಂದಿದೆ. ಅಂಕಗಳಿಂದ ಯಾವುದೇ ವಿದ್ಯಾರ್ಥಿಗಳನ್ನು ಅಳೆಯಬಾರದು. ಕೊರೋನವು ವಿದ್ಯಾರ್ಥಿಗಳಿಗೆ ಅಂಕ ಮುಖ್ಯವಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೋವಿಡ್‍ನ ಸಂದರ್ಭದಲ್ಲಿ ಜೀವನದ ಶಾಶ್ವತ ಸಂಗಾತಿ ದೇಹ ಮತ್ತು ಮನಸ್ಸಾಗಿತ್ತು. ಅಂಕಗಳಿಗಿಂತ ಮುಖ್ಯವಾಗಿರುವುದು ಜೀವನದಲ್ಲಿ ಟೀಕೆಗಳನ್ನು ಬಾರದ ಹಾಗೆ ನೋಡಿಕೊಳ್ಳುವುದು ಎಂದು ಖ್ಯಾತ ಗೀತಾಸಾಹಿತ್ಯಗಾರ ವಿಠ¯ ನಾಯಕ್ ಕಲ್ಲಡ್ಕ ತಿಳಿಸಿದರು. ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ) ಪುತ್ತೂರು ಇದರ ಅಧೀನಕ್ಕೆ ಒಳಪಟ್ಟ ಕಬಕ ಪೋಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ರೆಸಿಡೆನ್ಶಿಯಲ್ ಸ್ಟಡಿ ಸೆಂಟರ್ ನಲ್ಲಿ ಮೊದಲ ಬಾರಿಗೆ 72ನೇ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾತನಾಡಿದರು.

ತಮ್ಮ ಹಾಸ್ಯೋಕ್ತಿಗಳಿಂದ ಅತಿಥಿ ಉಪನ್ಯಾಸವನ್ನು ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಮನರಂಜಿಸುತ್ತಾ media(social), mobile, motor bike ಗಳಿಂದ ದೂರವಿರಿ ಎಂದು ಸಂದೇಶ ನೀಡಿದರು. ಪ್ರಗತಿ ರೆಸಿಡೆನ್ಶಿಯಲ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಪಿ.ವಿ. ಗೋಕುಲ್‍ನಾಥ್ ಧ್ವಜಾರೋಹಣ ನೆರವೇರಿಸಿದರು. ಕೊರೋನಾದಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದರೂ ವಿದ್ಯಾರ್ಥಿಗಳಿಗೆ ದೇಶಪ್ರೇಮದ ಮೇಲಿರುವ ಉತ್ಸಾಹ ಕುಂಠಿತವಾಗಿಲ್ಲ.

ಜವಾಹರ್ ನವೋದಯ ಪ್ರವೇಶ ಪರೀಕ್ಷೆ ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಪಡೆದ ಉತ್ತಮ ಫಲಿತಾಂಶವೇ ಈ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಕಾರಣವೆಂದರು ಅಲ್ಲದೇ ಏಳ್ಮುಡಿಯಲ್ಲಿ ಆರಂಭವಾದ ಈ ಪುಟ್ಟ ಸಂಸ್ಥೆ ಪುತ್ತೂರಿನಿಂದ ಸುಮಾರು 5 ಕಿ.ಮೀ. ನಷ್ಟು ದೂರವಿರುವ ಮಾಣಿ-ಮೈಸೂರು ಹೆದ್ದಾರಿಯಲ್ಲಿರುವ ಪೋಳ್ಯ ಎಂಬಲ್ಲಿ ಸುಸಜ್ಜಿತ ತರಗತಿ ಕೊಠಡಿ, ವಿಶಾಲವಾದ ಮೈದಾನ, ಗ್ರಂಥಾಲಯ, ಪ್ರಯೋಗಶಾಲೆ, ಹಾಸ್ಟೆಲ್ ವ್ಯವಸ್ಥೆಯೊಂದಿಗೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸ್ಥೆ ಬೆಳೆದು ಬಂದ ಹೆಜ್ಜೆಯನ್ನು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಿಂಹಾವಲೋಕಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ನಡೆಸಿದ 2020ನೇ ಸಾಲಿನ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ (KSET) ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ರೇಣುಕಾ ಸಂದೀಪ್ ಮತ್ತು ಕಾರ್ಯಕ್ರಮಕ್ಕೆ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ವಿಠಲ ನಾಯಕ್ ಕಲ್ಲಡ್ಕ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯವರಿಂದ ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಗಣಿತಶಾಸ್ತ್ರ ಪ್ರಾಧ್ಯಾಪಕಿಯಾದ ಕುಮಾರಿ ರಕ್ಷಾ ಪಿ ಪ್ರಾರ್ಥನೆ ಹಾಡಿದರು. ಸಂಸ್ಥೆಯ ವಿದ್ಯಾರ್ಥಿಗಳಾದ ಕುಮಾರಿ ಕೃತಿಕಾ ಮತ್ತು ಹರ್ಷಿತಾ ಸಭಾ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಮತ್ತು ಧನ್ಯಾವಾದವನ್ನು ನಿರ್ವಹಿಸಿದರು. ಭೋದಕ ಮತ್ತು ಭೋದಕೇತರ ವರ್ಗದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.