ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪಾರಂಪರಿಕ ಮಾದರಿ ಸ್ಪರ್ಧೆ ಪಾರಂಪರಿಕ ವಸ್ತುಗಳ ಜ್ಞಾನ ಮಕ್ಕಳಲ್ಲಿ ಬೆಳೆಯಬೇಕು; ರಮೇಶ್ ಕೆ.-ಕಹಳೆ ನ್ಯೂಸ್
ಪುತ್ತೂರು : ವಿದ್ಯಾರ್ಥಿಗಳಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಉತ್ತಮ ಅವಕಾಶ ಮತ್ತು ಪ್ರೊತ್ಸಾಹ ನೀಡುವುದು ನಮ್ಮ ಕರ್ತವ್ಯ. ಹಾಗೇ ನಮ್ಮ ದೇಶ ಪಾರಂಪರಿಕವಾಗಿ ಮುನ್ನಡೆದಿರುವುದು ನಮ್ಮ ಹೆಮ್ಮೆ.ದೇಶದ ಸಾಂಸ್ಕøತಿಕ ಸೊಬಗಿಗೆ ಪ್ರವಾಸಿಗರೂ ನಮ್ಮ ದೇಶಕ್ಕೆ ಬರುವುದು ಹೆಚ್ಚಾಗಿದೆ.
ಹಾಗಾಗಿ ಪಾರಂಪರಿಕ ವಸ್ತುಗಳ ಜ್ಞಾನ ಮಕ್ಕಳಲ್ಲಿ ಬೆಳೆಯಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ್ ಕೆ. ಹೇಳಿದರು. ಅವರು ಕಾಲೇಜಿನ ಐಕ್ಯೂಎಸಿ, ಇತಿಹಾಸ ವಿಭಾಗ, ಹೆರಿಟೇಜ್ ಕ್ಲಬ್, ರಾಜ್ಯಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ನಡೆದ ಭಾಷಣ ಮತ್ತು ಮಾಡೆಲ್ ಸ್ಪರ್ಧೆಯನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ ಕಲಾ ವಿಭಾಗ ಎಂಬುದು ಶ್ರೇಷ್ಠ ಮಾತ್ರವಲ್ಲದೆ ಅದು ನಮ್ಮ ಹೆಮ್ಮೆ. ವಿಭಾಗವನ್ನು ಎತ್ತರಕ್ಕೆ ಹಬ್ಬಿಸುವುದು ನಮ್ಮ ಕೆಲಸ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಲಾ ವಿಭಾಗದ ಇತಿಹಾಸ ಮತ್ತು ರಾಜ್ಯಶಾಸ್ತ್ರದ ಪ್ರಶ್ನೆಗಳು ಇಲ್ಲದೆ ಇರುವುದಿಲ್ಲ. ಹಾಗಾಗಿ ಭಾಗವಹಿಸುವಿಕೆ ಎಲ್ಲಾ ಕ್ಷೇತ್ರದಲ್ಲಿ ಮುಖ್ಯವಾಗಿರುತ್ತದೆ. ದೇಶ ಪ್ರೇಮದ ಜೊತೆಗೆ ದೇಶಕ್ಕೆ ಒಳಿತನ್ನು ಮಾಡೋಣ ಎಂದು ನುಡಿದರು. ವೇದಿಕೆಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಾಯಿಕೃಪ ಮತ್ತು ಸುಲಕ್ಷಣ ಪ್ರಾರ್ಥಿಸಿದರು. ವಿದ್ಯಾರ್ಥಿನಿ ರುಚಿತಾ ಹೆಗ್ಡೆ ಸ್ವಾಗತಿಸಿ, ವಿದ್ಯಾರ್ಥಿ ಗಿರೀಶ್ ವಂದಿಸಿದರು. ವಿದ್ಯಾರ್ಥಿನಿ ಶ್ರೀಜನಿ ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪುತ್ತೂರಿನ ಫಿಲೋಮಿನ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ, ಶ್ರೀರಾಮ ಪದವಿಪೂರ್ವ ಕಾಲೇಜು, ಕಲ್ಲಡ್ಕ ದ್ವಿತೀಯ ಮತ್ತು ಅಂಬಿಕಾ ಪದವಿಪೂರ್ವ ಕಾಲೇಜು ತೃತೀಯ ಸ್ಥಾನ ಪಡೆಯಿತು. ಹಾಗೂ ಪಾರಂಪರಿಕ ಮಾದರಿ ಸ್ಪರ್ಧೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು, ಕುಂಬ್ರ ಪ್ರಥಮ ಮತ್ತು ವಿವೇಕಾನಂದ ಪದವಿಪೂರ್ವ ಕಾಲೇಜು, ಪುತ್ತೂರು ದ್ವಿತೀಯ ಸ್ಥಾನ ಪಡೆದುಕೊಂಡಿತು.