ಬೆಟ್ಟಂಪಾಡಿ : ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಅರಿವು ಅವಶ್ಯಕವಾಗಿ ಇರಬೇಕು ಎಂದು ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆ ಕಾಟುಕುಕ್ಕೆಯ ರಾಜ್ಯಶಾಸ್ತ್ರ ಉಪನ್ಯಾಸಕರಾದ ಲೆಫ್ಟಿನೆಂಟ್ ಈಶ್ವರ ನಾಯಕ್ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ’ ರಾಷ್ಟ್ರೀಯ ಮತದಾರರ ಸಾಕ್ಷರತಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿರು. ಮತದಾನದ ಹಕ್ಕು ಹೊಂದಿರುವ ಪ್ರಜೆಗಳು ಮತದಾನದ ಹಕ್ಕನ್ನು ಚಲಾಯಿಸುವುದರ ಜೊತೆಗೆ ಮತದಾನದ ಗೌಪ್ಯತೆಯನ್ನು ಕೂಡ ಕಾಪಾಡುವ ಜವಬ್ದಾರಿಯನ್ನು ಹೊಂದಿರಬೇಕು ಎಂದು ಹೇಳಿದರು. ಕಾಲೇಜಿನ ಮತದಾರ ಸಾಕ್ಷರತಾ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ದಾಮೋದರ ಕಣಜಾಲು ವಿದ್ಯಾರ್ಥಿ ಜೀವನದಲ್ಲಿ ಮತದಾನದ ಮಹತ್ವ ಮತ್ತು ವೈಯಕ್ತಿಕ ಜವಬ್ದಾರಿಗಳನ್ನು ತಿಳಿಯುವುದು ಅಗತ್ಯ ಎಂದು ಹೇಳಿದರು. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳಾಗಿರುವ ಪ್ರಜೆಗಳು ಮತದಾನದ ಮೂಲಕ ತಮ್ಮ ಮಹತ್ವವನ್ನು ಸಾಬೀತು ಪಡಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ದೀಕ್ಷಿತ್ ಕುಮಾರ್, ಶ್ರೀ ಶಶಿಕುಮಾರ, ಶ್ರೀ ಉದಯರಾಜ್, ಶ್ರೀ ಪ್ರಮೋದ್ ಎಂ ಜಿ, ಗ್ರಂಥಪಾಲಕರಾದ ಶ್ರೀ ರಾಮ ಕೆ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಅಧಿಕಾರಿ ಶ್ರೀ ಹರಿಪ್ರಸಾದ್ ಎಸ್ ಸ್ವಾಗತಿಸಿದರು. ವಿದ್ಯಾರ್ಥಿನಿ ಮೋನಿಕ ಮೊಂತೆರೋ ವಂದಿಸಿದರು. ವಿದ್ಯಾರ್ಥಿನಿ ಶೃತಿಕ ಪಿ ಕಾರ್ಯಕ್ರಮ ನಿರೂಪಿಸಿದರು.