Recent Posts

Monday, January 20, 2025
ಹೆಚ್ಚಿನ ಸುದ್ದಿ

ಅಂಬೇಡ್ಕರ್ ಜೀವನ ಚರಿತ್ರೆ ಒಂದಿದ್ದಾರೆ ಸಾಕು, ನಮ್ಮ ಸಂವಿಧಾನದ ಹಕ್ಕು ಮತ್ತು ಸಮಾಜದ ಕರ್ತವ್ಯದ ಬಗ್ಗೆ ಅರಿತುಕೊಳ್ಳಲು ಸಾಧ್ಯ; ಎಎಸ್‍ಐ ಯೊಗೀಶ್-ಕಹಳೆ ನ್ಯೂಸ್

ಕೊರಟಗೆರೆ: ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ಕರ್ನಾಟಕ ದಲಿತ ಸರ್ವೋದಯ ಸಮಿತಿಯ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ, ಮಂಗಳವಾರ ಏರ್ಪಡಿಸಲಾಗಿದ್ದ 72ನೇ ಗಣರಾಜ್ಯೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಸಂವಿಧಾನ ಕಿರುವತ್ತಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭಕ್ಕಿಂತ ಮೊದಲು ಕರ್ನಾಟಕ ದಲಿತ ಸರ್ವೋದಯ ಸಮಿತಿ ಗ್ರಾಮಶಾಖೆಯಿಂದ ಜೆಟ್ಟಿ ಅಗ್ರಹಾರ ಶಾಖೆಯನ್ನು ಜಿಲ್ಲಾಧ್ಯಕ್ಷ ಬಿ. ಸಿ. ಹರೀಶ್ ಉದ್ಘಾಟಿಸಿದರು. ಕೊರಟಗೆರೆ ಎಎಸ್‍ಐ ಯೊಗೀಶ್ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂವಿಧಾನದ ಕಿರುವತ್ತಿಗೆ ಪುಸ್ತಕವನ್ನು ವಿತರಣೆ ಮಾಡಿದರು. ಬಳಿಕ ಕಾರ್ಯಕ್ರಮದಲ್ಲಿ ಕೊರಟಗೆರೆ ಪೊಲೀಸ್ ಠಾಣೆ ಎಎಸ್‍ಐ ಯೊಗೀಶ್ ಮಾತನಾಡಿ ಅಂಬೇಡ್ಕರ್ ಜೀವನ ಚರಿತ್ರೆ ಒಂದಿದ್ದಾರೆ ಸಾಕು, ನಮ್ಮ ಸಂವಿಧಾನದ ಹಕ್ಕು ಮತ್ತು ಸಮಾಜದ ಕರ್ತವ್ಯದ ಬಗ್ಗೆ ಅರಿತುಕೊಳ್ಳಲು ಸಾಧ್ಯ ಎಂದು ಅವರ ಜೀವನ ಮಹತ್ವದ ಅರಿವನ್ನು ಮೂಡಿಸಿದ ಅವರು ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಹೋರಾಟವನ್ನು ಮನನ ಮಾಡಿಕೊಂಡು ನಮ್ಮೆಲ್ಲರಿಗೆ ಇದು ಸ್ಫೂರ್ತಿಯಾಗಬೇಕು. ಪ್ರತಿಯೊಬ್ಬ ಭಾರತೀಯನಿಗೂ ದೇಶ ಪ್ರೇಮ ಕಿಚ್ಚು ಇರಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸರ್ವೋದಯ ಸಮಿತಿ ವಿಭಾಗದ ಜಿಲ್ಲಾಧ್ಯಕ್ಷ ಬಿ.ಸಿ.ಹರೀಶ್, ಪ್ರಧಾನ ಕಾರ್ಯದರ್ಶಿ ಮಾರುತಿ ಪ್ರಸನ್ನ, ಕೊರಟಗೆರೆ ಅಧ್ಯಕ್ಷ ಶ್ರೀಧರ್, ಸದಸ್ಯ ಚೇತನ್, ರಂಗಸ್ವಾಮಿ, ಪ್ರಸಾದ್, ರಂಗರಾಜು, ಮನೋಜ್, ರಾಕೇಶ್, ಎಸ್‍ಡಿಎಂಸಿ ಅಧ್ಯಕ್ಷ ನಾಗರಾಜು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕವೃಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.