Recent Posts

Monday, January 20, 2025
ಬಂಟ್ವಾಳ

ಯಕ್ಷಮಿತ್ರರು ಕೈಕಂಬ ಬಿ.ಸಿ.ರೋಡ್ ಆಶ್ರಯದಲ್ಲಿ ನಾಳೆ ಸಂಜೆ 12ನೇ ವರ್ಷದ ಯಕ್ಷಗಾನ; ಹನುಮಗಿರಿ ಮೇಳದಿಂದ ಪ್ರದರ್ಶನ-ಕಹಳೆ ನ್ಯೂಸ್

ಬಂಟ್ವಾಳ : ಯಕ್ಷಮಿತ್ರರು ಕೈಕಂಬ ಬಿ.ಸಿ.ರೋಡ್ ಆಶ್ರಯದಲ್ಲಿ 12ನೇ ವರ್ಷದ ಯಕ್ಷಗಾನ ಕಾರ್ಯಕ್ರಮ ನಾಳೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯ ಹೊರಾಂಗಣದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಹನುಮಗಿರಿ ಮೇಳದಿಂದ ಶ್ರೀಕೃಷ್ಣ ತುಲಾಭಾರ, ಶೂರ್ಪನಖಾ ವಿವಾಹ, ಅಹಿರಾವಣ, ಮಹಿರಾವಣ ಎಂಬ ಕಥಾಭಾಗ ಪ್ರದರ್ಶನ ಇರಲಿದೆ. ಹಾಗೇ ಹಿರಿಯ ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಅವರನ್ನು ಉದ್ಯಮಿ ಮನೋಹರ ಶೆಟ್ಟಿ ಕೋಡಿಬೆಟ್ಟು ಸನ್ಮಾನಿಸಲಿದ್ದಾರೆ. ಹಾಗೂ ಮುಖ್ಯ ಅತಿಥಿಯಾಗಿ ಹವ್ಯಾಸಿ ಕಲಾವಿದೆ ಮತ್ತು ಉಪನ್ಯಾಸಕಿ ಕವಿತಾ ಯಾದವ್ ಭಾಗವಹಿಸಲಿದ್ದಾರೆ ಎಂದು ಯಕ್ಷಮಿತ್ರರು ತಿಳಿಸಿದ್ದಾರೆ.