Recent Posts

Sunday, January 19, 2025
ಸಿನಿಮಾ

‘ನನ್ನ ಮನಸ್ಸೇ, ನನ್ನ ಶತ್ರು’ ಅಂತಾ ಬರೆದಿಟ್ಟು 5ನೇ ಮಹಡಿಯಿಂದ ಜಿಗಿದ ನಿರೂಪಕಿ

RADHIKA-REDDY

ಹೈದರಾಬಾದ್: ನ್ಯೂಸ್ ನಿರೂಪಕಿ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಹೈದರಾಬಾದ್ ನ ಮೂಸಪೇಟ್‍ನಲ್ಲಿ ನಡೆದಿದೆ.

ರಾಧಿಕಾ ರೆಡ್ಡಿ(36) ಆತ್ಮಹತ್ಯೆ ಮಾಡಿಕೊಂಡ ನಿರೂಪಕಿ. ರಾಧಿಕಾ ಖಿನ್ನತೆಯಿಂದ ಬಳಲುತ್ತಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ನಂತರ ನೇರವಾಗಿ ಟೆರೇಸ್‍ಗೆ ಹೋಗಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಕ್ಕಟ್ ಪಲ್ಲಿಯ ಸಬ್ ಇನ್ಸ್ ಪೆಕ್ಟರ್ ಮಜಿದ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
RADHIKA-REDDY

ರಾಧಿಕಾ 5ನೇ ಮಹಡಿಯಿಂದ ಜಿಗಿದ್ದಾಗ ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದವು. ತೀವ್ರ ರಕ್ತಸ್ರಾವದಿಂದಾಗಿ ರಾಧಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಧಿಕಾ ಬ್ಯಾಗ್ ನಲ್ಲಿ ಡೆತ್ ನೋಟ್ ಸಿಕ್ಕಿದ್ದು, ನನ್ನ ಮನಸ್ಸೇ, ನನ್ನ ಶತ್ರು ಅಂತಾ ಬರೆದಿದ್ದಾರೆ ಎಂದು ಎಸ್‍ಐ ಮಜಿದ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

6 ತಿಂಗಳ ಹಿಂದೆ ರಾಧಿಕಾ ಪತಿಯಿಂದ ವಿಚ್ಚೇದನ ಪಡೆದಿದ್ದರು. ವಿಚ್ಛೇದನದ ಬಳಿಕ ರಾಧಿಕಾ ತನ್ನ 14 ವರ್ಷದ ಬುದ್ಧಿಮಾಂದ್ಯ ಮಗನನ್ನು ತವರು ಮನೆಯಲ್ಲಿ ಬಿಟ್ಟು ಬಂದಿದ್ದರು. ಕೆಲಸದ ನಿಮಿತ್ತ ರಾಧಿಕಾ ಏಕಾಂಗಿಯಾಗಿ ಹೈದರಾಬಾದ್ ನಲ್ಲಿ ಉಳಿದುಕೊಂಡಿದ್ದರು. ವಿಚ್ಛೇದನದ ಬಳಿಕ ರಾಧಿಕಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಅಂತಾ ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ಈ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.