ಹೈದರಬಾದ್ : ಕೃಷಿ ನಾಶಮಾಡುವ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲುವ ಅಧಿಕಾರವನ್ನು ಗ್ರಾಮ ಮುಖ್ಯಸ್ಥ ಅಥವಾ ಸರಪಂಚರಿಗೆ ನೀಡಿದ್ದು, ಕಾಡುಹಂದಿಗಳನ್ನು ಕೊಂದು ಬೆಳೆ ಸಂರಕ್ಷಿಸಬಹುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಇದಕ್ಕೆ ಪ್ರಾಣಿ ಪ್ರಿಯರು ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರ ಈ ಅಧಿಸೂಚನೆಯನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ತೆಲಂಗಾಣದ ಗ್ರಾಮೀಣ ಪ್ರದೇಶಗಳಲ್ಲಿ ಕಾಡು ಹಂದಿ ಉಪಟಳ ಹೆಚ್ಚಾಗಿರುವ ಕಾರಣ ಈ ಅಧಿಸೂಚನೆ ಜಾರಿಗೊಳಿಸಲಾಗಿದೆ ಎಂದು ಹೇಳಿದೆ.