Sunday, January 19, 2025
ಪುತ್ತೂರು

ಚೆಕ್ ಅಮಾನ್ಯ ಪ್ರಕರಣ ; ಆರೋಪಿ ಖುಲಾಸೆ – ಕಹಳೆ ನ್ಯೂಸ್

ಪುತ್ತೂರು : ಸರಸ್ವತಿ ಸೌಹಾರ್ದ ಕ್ರೆಡಿಟ್ ಸೊಸೈಟಿ ಕಡಬ ಶಾಖೆ ಯಿಂದ ವಾಹನ ಖರೀದಿ ಸಾಲವನ್ನು ಆರೋಪಿ ‌ದಿನೇಶ್ ಎ ಬಿ ಎಂಬವರು ಪಡೆದಿದ್ದು ಸಾಲ ಮರು ಪಾವತಿಗೆಂದು ನೀಡಿದ ಚೆಕ್ ಅಮಾನ್ಯ ಗೊಂಡಿದೆ ಎಂದು ನ್ಯಾಯಾಲಯದಲ್ಲಿ ‌ಪ್ರಕರಣ ದಾಖಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣದ ತನಿಖೆ ನಡೆಸಿದ ಪುತ್ತೂರಿನ ಎರಡನೆ ಹೆಚ್ಚು ವರಿ ಸಿವಿಲ್ ಮತ್ತು ಜೆಎಂಎಪ್ ಸಿ ನ್ಯಾಯಲಯವು ಆರೋಪಿತನಿಂದ ಚೆಕ್ ನೀಡಲಾಗಿದೆ ಎಂಬ ದಿವಸ ಸಂಸ್ಥೆ ಗೆ ಕಾನೂನಾತ್ಮಕ ವಾಗಿ ಆರೋಪಿತನಿಂದ ಚೆಕ್ ನಲ್ಲಿ ನಮೂದಿಸಿದ ಮೊತ್ತ ವನ್ನು ನೀಡಲು ಬಾಕಿ ಇದೆ ಎಂಬ ಬಗ್ಗೆ ದೂರುದಾರ ಸೊಸೈಟಿ ಸಾಬೀತು ಪಡಿಸಲು ವಿಫಲವಾಗಿದೆ ಎಂಬ ಕಾರಣಕ್ಕೆ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಆರೋಪಿ ಪರ ಪುತ್ತೂರಿನ ಖ್ಯಾತ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು ಇವರು ವಾದಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು