ನವದೆಹಲಿ : ದೇಶದಲ್ಲಿ ಬ್ರಿಟನ್ ರೂಪಾಂತರ ಕೊರೋನಾ ಸೋಂಕಿತರ ಸಂಖ್ಯೆ 165ಕ್ಕೆ ಏರಿದೆ. ಎಲ್ಲ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೂಲ ಕೊರೋನಾ ವೈರಸ್‍ಗೆ ಹೋಲಿಸಿದರೆ ಬ್ರಿಟನ್ ಕೊರೋನಾ ವೈರಸ್ ವೇಗವಾಗಿ ಹರಡುತ್ತಿದೆ.
ವಿಶ್ವದ ಇತರ ರಾಷ್ಟ್ರಗಳಲ್ಲಿ ಕೂಡ ಬ್ರಿಟನ್ ವೈರಸ್ ತನ್ನ ಅಸ್ತಿತ್ವ ತೋರಿಸಿದ್ದು, ಡೆನ್ಮಾರ್ಕ್ , ನೆದರ್ ಲ್ಯಾಂಡ್, ಆಸ್ಟ್ರೇಲಿಯಾ, ಇಟಲಿ, ಫ್ರಾನ್ಸ್, ಜರ್ಮನಿ, ಸ್ವೀಡನ್, ಮತ್ತು ಜಪಾನ್‍ನಲ್ಲಿ ಕೂಡ ಬ್ರಿಟನ್ ವೈರಸ್ ಕಾಣಿಸಿಕೊಂಡಿದೆ. ಇದಕ್ಕೆ ಕೇಂದ್ರ ಸರ್ಕಾರ, ಬ್ರಿಟನ್ ಕೊರೋನಾ ವೈರಸ್ ತಡೆಗೆ ಎಲ್ಲ ರಾಜ್ಯ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.