Friday, January 24, 2025
ಬಂಟ್ವಾಳ

ಬಂಟ್ವಾಳ ತಾಲೂಕು ಕುಲಾಲ ಸುಧಾಕರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾಕರ ಸಂಘ (ರಿ) ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ಕಾರ್ಯಕ್ರಮ ಬಿ.ಸಿ.ರೋಡಿನ ಪೊಸಳ್ಳಿಯಲ್ಲಿರುವ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಜಯಂತಿ ಗಂಗಾಧರ್ ಅಧ್ಯಕ್ಷತೆಯನ್ನು ವಹಿಸಿದ್ದು, ಸುಮಾರು 48 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 18 ವಿದ್ಯಾರ್ಥಿಗಳಿಗೆ ನಿರಂತರ ವಿದ್ಯಾರ್ಥಿ ವೇತನ, 9 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಅಧ್ಯಕ್ಷ ಮಯ್ಯೂರ್ ಉಳ್ಳಾಲ್, ಕೀಲು ಮತ್ತು ಎಲುಬು ತಜ್ಞ ವೈದ್ಯ ಡಾ. ಚೇತನ್‍ರಾಜ್, ಪ್ರಮುಖರಾದ ಪುರಂದರ ಸಜಿಮ, ರಮೇಶ್ ಸಾಲಿಯಾನ್, ನಿಶಾಂತ್ ಎಂ.ಬಿ, ನಮಿತಾ ಉಮೇಶ್, ಸುಕುಮಾರ್ ಬಂಟ್ವಾಳ್, ಭಾಗವಹಿಸಿದ್ದರು. ಹಾಗೂ ದಾಮೋದರ ಮಾಸ್ತರ್ ಸ್ವಾಗತಿಸಿದ್ದು, ಸುಕುಮಾರ್ ಬಂಟ್ವಾಳ ವಂದಿಸಿದರು. ಮತ್ತು ಕಾರ್ಯಕ್ರಮವನ್ನು ರಾಧಕೃಷ್ಣ ಬಂಟ್ವಾಳ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು