ಬೆಳಂದೂರು: ಕಡಬ ತಾಲೂಕು ಬೆಳಂದೂರು ಗ್ರಾಮದ ಪಟ್ಟೆ ಎಂಬಲ್ಲಿನ ದಿವಂಗತ ಮಾಯಿಲಪ್ಪ ಗೌಡ ಎಂಬವರ ಒಬ್ಬನೇ ಮಗ ರಾಜೇಶ್ (30 ವರ್ಷ) 4 ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ ಎಡಗಾಲು ಮುರಿದು ಮುಖ ಮತ್ತು ತಲೆಗೆ ಗಂಭೀರ ಗಾಯಗಳಾಗಿ ಮಂಗಳೂರಿನ ಎ ಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸುಮಾರು 6 ವರ್ಷಗಳಿಂದ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿರುವ 55 ವರ್ಷದ ತಾಯಿ ಸೀತಮ್ಮ ಚಿಕಿತ್ಸೆಯ ಎಲ್ಲಾ ಖರ್ಚುವೆಚ್ಚಗಳನ್ನು ವಯರಿಂಗ್ ಕೆಲಸ ಮಾಡಿ ಭರಿಸುತ್ತಿದ್ದ ರಾಜೇಶ್ ಇದೀಗ ಸ್ವತಃ ತಾನೇ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ರಾಜೇಶನ ಶಸ್ತ್ರಚಿಕಿತ್ಸೆಗೆ ಅಂದಾಜು 4 ರಿಂದ 5 ಲಕ್ಷ ಖರ್ಚಾಗಬಹುದೆಂದು ವೈದ್ಯರು ತಿಳಿಸಿದ್ದು, ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ರಾಜೇಶನ ಕುಟುಂಬವು ಚಿಕಿತ್ಸೆಯ ವೆಚ್ಚ ಭರಿಸಲಾಗದೇ ಕಂಗಾಲಾಗಿದೆ. ಆದ್ದರಿಂದ ಸಹೃದಯಿಗಳು ರಾಜೇಶನ ಚಿಕಿತ್ಸೆಗೆ ನೆರವಾಗಬೇಕಾಗಿದೆ. ರಾಜೇಶ್ ಕುಮಾರ್ ಪಿ.AC N. 89123054116, IFSC: KVGB 0005404, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಕಾಣಿಯೂರು, ಫೋನ್ ಫೇ ನಂ. 7259510550. ಹೆಚ್ಚಿನ ಮಾಹಿತಿಗಾಗಿ: ಸುಪ್ರಿತ್ ಜೈನ್ : 8123276023, ಶ್ರೀಧರ ಗೌಡ ಬನಾರಿ: 9741836059.