Friday, November 22, 2024
ರಾಜಕೀಯ

ಏ. 1 ರ0ದು ” ಪಪ್ಪು ಡೇ ” – ಬಿಜೆಪಿ ಟ್ವೀಟ್ ವಾರ್!

ಏ. 02: ಈ ಬಾರಿಯ ಮೂರ್ಖರ ದಿನ ರಾಜಕೀಯ ರಂಗು ಪಡೆದಿದ್ದು, ಎರಡು ಪ್ರಮುಖ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟಕ್ಕೆ ಏಪ್ರಿಲ್ ಫೂಲ್ ದಿನವನ್ನು ಬಳಸಿಕೊಂಡಿತ್ತು. ಪ್ರಧಾನಿ ಮೋದಿ ಅವರು ಈಡೇರಿಸದ ಆಶ್ವಾಸನೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಏಪ್ರಿಲ್ ಫೂಲ್ ದಿನವನು ’ಜುಮ್ಲಾ ದಿನ’ ಎಂದು ಕರೆದರೆ, ಬಿಜೆಪಿಯು ರಾಹುಲ್ ಗಾಂಧಿ ಅವರು ಮಾಡಿರುವ ಎಡವಟ್ಟುಗಳ ವಿಡಿಯೋ ಅಪ್ ಲೋಡ್ ಮಾಡಿ , ಮೂರ್ಖರ ದಿನವನ್ನು ’ಪಪ್ಪು ಡೇ’ ಎಂದು ಕರೆದಿದೆ. ಜತೆಗೆ ಮಿಸ್ಟರ್ ರಾಹುಲ್ ತಪ್ಪೇ ಮಾಡುವುದಿಲ್ಲ ನೀವು ಎಡವಟ್ಟುಗಳ ಅನಭಿಷ್ತಿಕ್ತ ದೊರೆ. ಇದು ಟ್ರೇಲರ್ ನೀವು ಯಾವತ್ತೂ ನಮಗೆ ಮನರಂಜನೆ ನೀಡುವುದನ್ನು ಮುಂದುವರಿಸುತ್ತೀರಿ ಎಂದು ನಂಬುತ್ತೇನೆ ಎಂದು ಬರೆದು ಕಾಲೆಳೆಯಲಾಗಿದೆ.

ಇನ್ನು ಮುರ್ಖರ ದಿನವನ್ನು ಪಿಎಂ ಮೋದಿ ಅವರನ್ನು ಲೇವಡಿ ಮಾಡಲು ಬಳಸಿಕೊಂಡಿರುವ ಕಾಂಗ್ರೆಸ್ ಜುಮ್ಲಾ ದಿನ ಎಂದು ಕರೆದಿದೆ. ಉದ್ಯೋಗ ಸೃಷ್ಟಿ , ಸ್ಮಾರ್ಟ್ ಸಿಟಿ ಯೋಜನೆ , ಕಪ್ಪು ಹಣ ವಾಪಾಸ್ , ಎಲ್ಲರ ಖಾತೆಗೂ 15 ಲಕ್ಷ ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ,  ಮೋದಿ ಅವರನ್ನು ಟೀಕಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು