ಹಾಸನ: ಶಕ್ತಿ ದೇವತೆ ಹಾಸನಾಂಬ ದೇಗುಲದಲ್ಲ ಕಳ್ಳರು ಕೈಚಳಕ ತೋರಿದ್ದು, ದೇಗುಲದ ಬಾಗಿನ್ನು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಹಾಸನಾಂಬ ದೇಗುಲದಲ್ಲಿ ಕಳೆದ ರಾತ್ರಿ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದು, ದೇಗುಲದ ಬಾಗಿಲನ್ನೇ ಮುರಿದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮೂಲಗಳ ಪ್ರಕಾರ ದೇಗುಲದಲ್ಲಿ ಹಣ ಮತ್ತು ಭಕ್ತರ ಕಾಣಿಕೆ ವಸ್ತುಗಳು ಏನೂ ಇರಲಿಲ್ಲ ಎನ್ನಲಾಗಿದೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಸಂದರ್ಭದಲ್ಲಿ ದೇಗುಲವನ್ನು ತೆರೆದು ಬಳಿಕ ಜಾತ್ರೆ ಅಂತ್ಯದಲ್ಲಿ ದೇಗುಲದ ಹುಂಡಿ ಮತ್ತು ಇತರೆ ಭಾಗಳಿಂದ ಬಂದ ಹಣ ಮತ್ತು ಕಾಣಿಕೆಗಳನ್ನು ಲೆಕ್ಕ ಹಾಕಿ ಸರ್ಕಾರಕ್ಕೆ ಒಪ್ಪಿಸಲಾಗುತ್ತದೆ.
ಹೀಗಾಗಿ ನಿನ್ನೆ ಕಳ್ಳರಿಗೆ ಈ ಹಣ ಸಿಕ್ಕಿಲ್ಲ. ಆದರೆ ದೇಗುಲದಲ್ಲಿ ದೇವರ ವಿಗ್ರಹಗಳು, ಅಲಂಕಾರಿಕ ವಸ್ತುಗಳು, ಸೇರಿದಂತೆ ಹಲವು ವಸ್ತುಗಳು ಇದ್ದವು. ಈ ವಸ್ತುಗಳನ್ನು ಕಳ್ಳರು ಹೊತ್ತೊಯ್ದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೇಗುಲದಲ್ಲಿ ಅಳವಡಿಸಲಾಗಿರುವ ದೇಗುಲದ ಸಿಸಿಟಿವಿ ಕ್ಯಾಮೆರಾಗಳ ದಾಖಲೆಯನ್ನೂ ಕೂಡ ಪೊಲೀಸರು ಪಡೆದಿದ್ದಾರೆ ಎನ್ನಲಾಗಿದೆ..
https://youtu.be/3Jk2aUE-1BQ