ನವದೆಹಲಿ : ದೆಹಲಿಯಲ್ಲಿ ಜನವರಿ 26 ರಂದು ನಡೆದ ಹಿಂಸಾಚಾರದ ವೇಳೆ 100 ಕ್ಕೂ ಹೆಚ್ಚು ರೈತರು ನಾಪತ್ತೆಯಾಗಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಹಾಗೂ 40ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಈ ಆರೋಪ ಮಾಡಿದ್ದು, ಅಲ್ಲದೇ ಕೆಂಪು ಕೋಟೆಯಲ್ಲಿ ಅಹಿತಕರ ಘಟನೆ ನಡೆದ ಬಳಿಕ ಈ ರೈತರು ನಾಪತ್ತೆಯಾಗಿದ್ದಾರೆ. ಆಮೇಲೆ ರೈತರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಈ ಕುರಿತು ಗಮನ ಹರಿಸಲು ಆರು ಮಂದಿ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರೈತ ಸಂಘಟನೆಗಳು ರಚಿಸಿದ್ದು, ಇದೇ ವೇಳೆ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 84 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ 38 ಪ್ರಕರಣಗಳು ದಾಖಲಿಸಲಾಗಿದೆ.