Friday, January 24, 2025
ಹೆಚ್ಚಿನ ಸುದ್ದಿ

ಒಡಿಶಾದ ರಸ್ತೆ ಅಪಘಾತದಲ್ಲಿ 9 ಮಂದಿ ಸಾವು, 11 ಮಂದಿಗೆ ಗಾಯ-ಕಹಳೆ ನ್ಯೂಸ್

ಒಡಿಶಾ : ಪಿಕ್ ಅಪ್ ವ್ಯಾನ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಮಗುಚಿಬಿದ್ದು 9 ಮಂದಿ ಮತಪಟ್ಟ ಘಟನೆ ಒಡಿಶಾದ ಜೇಪೋರ್ ನ ಮುರ್ತಹಂಡಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಯಲ್ಲಿ 11 ಮಂದಿಗೆ ಗಾಯಗೊಂಡಿದ್ದಾರೆ. ವ್ಯಕ್ತಿ ಸತ್ತ ಮೇಲೆ ನಡೆಯುವ 10ನೇ ದಿನದ ಧಾರ್ಮಿಕ ಕಾರ್ಯಕ್ರಮಕ್ಕೆ ಹೊರಟಿದ್ದ ಜನರು ದಾರಿ ಮದ್ಯದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ವತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಈ ಅಪಘಾತದ ಬಳಿಕ ಚಾಲಕ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ವಾಹನದಲ್ಲಿ 35 ಮಂದಿ ಇದ್ದರೆಂದು ಹೇಳಲಾಗಿದೆ. ಉಳಿದವರ ಕುರಿತು ಇನ್ನು ಮಾಹಿತಿ ದೊರೆಯಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು