ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2021-22 ನೇ ಸಾಲಿನ ಕೇಂದ್ರ ಬಜೆಟ್‍ನ ವಿವರ –ಕಹಳೆ ನ್ಯೂಸ್
ನವದೆಹಲಿ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22 ನೇ ಸಾಲಿನ ಕೇಂದ್ರ ಬಜೆಟ್‍ನ್ನು ಮಂಡಿಸಿದ್ದಾರೆ. ಅವರು ಸತತ ಮೂರನೇ ಬಾರಿಗೆ ಬಜೆಟ್ ಮಂಡಿಸಿದ್ದು, ಈ ಬಾರಿಯ ಕೇಂದ್ರ ಬಜೆಟ್ ಡಿಜಿಟಲ್ ಆಗಿದೆ.
ಸಾಂಪ್ರದಾಯಿಕ ಬಹಿ ಖಾತಾ ಬದಲಿಗೆ ಈ ಬಾರಿ ಟ್ಯಾಬ್ ಮೂಲಕ ಬಜೆಟ್ ಮಂಡಿಸಲಾಗಿದ್ದು, ಕೊರೊನಾ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ಬಜೆಟ್ ಅನ್ನು ಕಾಗದ ರಹಿತವಾಗಿ ಮಂಡನೆ ಮಾಡಲಾಗಿದೆ. ಬಜೆಟ್ ಪ್ರತಿಯು ಆನ್‍ಲೈನ್ ಆಪ್‍ನಲ್ಲಿ ಲಭ್ಯವಿದೆ. ಕೇಂದ್ರ ಬಜೆಟ್‍ನ ವಿವರವನ್ನು ಈ ರೀತಿಯಾಗಿ ನೀಡಿದ್ದು, ಕೊರೊನಾ ಲಸಿಕೆಗಾಗಿ ಸರ್ಕಾರ 35 ಸಾವಿರ ಕೋಟಿ ನೀಡಿದೆ. ಅಲ್ಲದೇ ಅಗತ್ತವಿದ್ದರೆ ಹೆಚ್ಚಿನ ಹಣ ನೀಡಲು ಸರ್ಕಾರ ಬದ್ದ ಎಂದು ಹೇಳಿದೆ. ಹಾಗೆಯೇ ರೈಲ್ವೆಗಾಗಿ 1,10,055 ಕೋಟಿ ರೂ.ಗಳನ್ನು ನೀಡುತ್ತಿದ್ದೇನೆ, ಅದರಲ್ಲಿ 1,07,100 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮಾತ್ರ. ಮತ್ತು ಬೆಂಗಳೂರಿನಲ್ಲಿ 58 ಕಿ.ಮೀ. ಹೊಸ ಮೆಟ್ರೋ ರೈಲು ಮಾರ್ಗಕ್ಕಾಗಿ 14,788 ಕೋಟಿ ಘೋಷಣೆ ಮಾಡಿದ್ದು, 2021-22 ರಲ್ಲಿ ಎಲ್‍ಐಸಿಯಲ್ಲಿ ಐಪಿಒ, ಇದಕ್ಕಾಗಿ ಅಗತ್ಯ ತಿದ್ದುಪಡಿ, ವಿಮಾ ಕಂಪನಿಗಳಲ್ಲಿ ಅನುಮತಿಸುವ ಎಫ್‍ಡಿಐ ಮಿತಿಯನ್ನು 49% ರಿಂದ 74% ಕ್ಕೆ ಹೆಚ್ಚಿಸಲು ವಿಮಾ ಕಾಯ್ದೆ 1938 ಅನ್ನು ತಿದ್ದುಪಡಿ, ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವ ಹೊಸ ನೀತಿ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ಪ್ರಮುಖ ರಾಷ್ಟ್ರೀಯ ಹೈವೇ ಯೋಜನೆ ಘೋಷಣೆ ಮಾಡಿದೆ. ಹಾಗೂ ಉಜ್ವಲ ಯೋಜನೆಯಡಿ ಮತ್ತೆ 1 ಕೋಟಿ ಕುಟುಂಬಗಳಿಗೆ ಗ್ಯಾಸ್ ಸರಬರಾಜು ಗುರಿ, ಆತ್ಮನಿರ್ಭರ್ ಸ್ವಸ್ತ್ ಭಾರತ್ ಯೋಜನೆಯಡಿ ಆರು ವರ್ಷಗಳಲ್ಲಿ ಸುಮಾರು 64,180 ಕೋಟಿ ವಿನಿಯೋಗ ಪ್ರಾರಂಭ, ಒಂದು ದೇಶ ಒಂದೇ ರೇಷನ್ ಕಾರ್ಡ್ ಘೋಷಣೆ, ಅಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಪೋರ್ಟಲ್, ಡಿಜಿಟಲ್ ಜನಗಣತಿಗೆ 3,768 ಕೋಟಿ ಮೀಸಲು 75 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿ ಹೊಂದಿರುವ ಹಿರಿಯ ನಾಗರಿಕರಿಗೆ ಐಟಿ ರಿಟರ್ನ್ ಸಲ್ಲಿಕೆಯಿಲ್ಲ, 5 ಕೋಟಿ ವಹಿವಾಟಿನ ಚಾರಿಟೇಬಲ್ ಟ್ರಸ್ಟ್‍ಗೆ ತೆರಿಗೆ ವಿನಾಯಿತಿ, ಅಸ್ಸಾಂ, ಬಂಗಾಳದ ಚಹಾ ಕಾರ್ಮಿಕರಿಗೆ 1,500 ಕೋಟಿ, ಕೃಷಿ ಸಾಲ ಗುರಿ 16.5 ಲಕ್ಷ ಕೋಟಿಗೆ ಹೆಚ್ಚಿಸುವ ಪ್ರಸ್ತಾಪ, ರಾಷ್ಟ್ರೀಯ ಶಿಕ್ಷಣ ನೀತಿಯಡಿ 15,000 ಕ್ಕೂ ಅಧಿಕ ಶಾಲೆಗಳ ಬಲವರ್ಧನೆಗೆ ಚಿಂತನೆ, 4,378 ನಗರ ಸ್ಥಳೀಯ ಸಂಸ್ಥೆಗಳಿಗೆ 2.87 ಲಕ್ಷ ಕೋಟಿ ವಿನಿಯೋಗದೊಂದಿಗೆ ಜಲ್ ಜೀವನ್ ಮಿಷನ್ ಘೋಷಣೆ, ಸರಕಾರಿ ಬಸ್‍ಗಳಿಗೆ ಕೇಂದ್ರ ಸರ್ಕಾರದಿಂದ 18 ಸಾವಿರ ಕೋಟಿ ನೆರವು ಮತ್ತು ಜವಳಿ ಉದ್ಯಮಕ್ಕೆ ಮೆಗಾ ಜವಳಿ ಪಾರ್ಕ್ ಯೋಜೆನ ಘೋಷಣೆ, 17 ಸಾವಿರ ಗ್ರಾಮೀಣ ಆರೋಗ್ಯ ಕೇಂದ್ರ ಸ್ಥಾಪನೆ, ವಿದೇಶಿ ಹೂಡಿಕೆ ಹೆಚ್ಚಳಕ್ಕೆ ನಿಯಮ ಸಡಿಸಲು ನಿರ್ಧಾರ, ಪೆಟ್ರೋಲ್, ಡಿಸೇಲ್ ಮೇಲೆ ಕೃಷಿ ಸೆಸ್, ಪೆಟ್ರೋಲ್, ಡಿಸೇಲ್, ಕಾಬೂಲ್ ಕಡಲೆ, ಸೇಬು, ಚಿನ್ನ-ಬೆಳ್ಳಿ, ವಾಹನ ಬಿಡಭಾಗ, ಹುರಿಗಡಲೆ, ಹತ್ತಿ, ಮೊಬೈಲ್, ಬಿಡಿಭಾಗ ದರ ಹೆಚ್ಚಳ, ಸಂಶೋಧನಾ ವಲಯ 50 ಸಾವಿರ ಕೋಟಿ, ಕೃಷಿ ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ ಹಾಗೂ ಉತ್ಪಾದನಾ ವಲಯಕ್ಕೆ 1.94 ಕೋಟಿ ರೂಪಾಯಿ ಅನುದಾನ, 2 ಸಾವಿರ ಕೋಟಿಗೂ ಅಧಿಕ ಹೂಡಿಕೆಯ ದೇಶದ ಒಟ್ಟು 7 ಬಂದರುಗಳ ಅಭಿವೃದ್ದಿಗೆ ಯೋಜನೆಯ ಬಜೆಟ್‍ಗಳನ್ನು ಕೇಂದ್ರ ಸರ್ಕಾರ ನೀಡಿದೆ.