Friday, January 24, 2025
ಪುತ್ತೂರು

ಅಂಬಿಕಾ ಸಂಸ್ಥೆಗಳ ಯೂಟ್ಯೂಬ್ ವಾಹಿನಿಯಲ್ಲಿ ಶೃಂಗೇರಿ ಶ್ರೀಗಳ ಉಪನ್ಯಾಸ-ಕಹಳೆ ನ್ಯೂಸ್

ಪುತ್ತೂರು : ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಸಂಸ್ಕøತ ಹಾಗೂ ತತ್ವಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಆಯೋಜಿಸಲಾದ ಶ್ರೀಮದ್ಭಗವದ್ಗೀತೆಯ ಹದಿನೆಂಟನೆಯ ಅಧ್ಯಾಯದ ಕುರಿತಾಗಿ ಶೃಂಗೇರಿಯ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆನ್‍ಲೈನ್ ಉಪನ್ಯಾಸ ಅಂಬಿಕಾ ಸಮೂಹ ಸಂಸ್ಥೆಗಳ ಯೂಟ್ಯೂಬ್ ವಾಹಿನಿ nattoja ದಲ್ಲಿ ಲಭ್ಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶ್ರೀಮದ್ಭಗವದ್ಗೀತೆಯ ವಿವಿಧ ಅಧ್ಯಾಯಗಳ ಕುರಿತಾದ ಉಪನ್ಯಾಸ ಕಾರ್ಯಕ್ರಮ ಅನೇಕ ಸಮಯಗಳಿಂದ ನಡೆಯುತ್ತಾ ಬಂದಿದ್ದು ಸಂಸ್ಥೆಯ ಯೂಟ್ಯೂಬ್ ವಾಹಿನಿಯಲ್ಲಿ ದೊರಕುತ್ತಿದೆ. ಶ್ರೀಮಗ್ಭಗವದ್ಗೀತಾ ಉಪನ್ಯಾಸ ಮಾಲಿಕೆಯನ್ನು ಅಂಬಿಕಾ ಸಮೂಹ ಸಂಸ್ಥೆಗಳು ಅಭಿಯಾನ ರೂಪದಲ್ಲಿ ಜಾರಿಗೊಳಿದ್ದು, ಪುತ್ತೂರಿನ ಧಾರ್ಮಿಕ ಪ್ರವಚನಪ್ರಿಯರಿಗೆ ಸಹಕಾರಿಯೆನಿಸಿದೆ. ವಿವಿಧ ಗಣ್ಯರು ವಿಷಯದ ಕುರಿತು ಉಪನ್ಯಾಸ ನೀಡಿರುತ್ತಾರೆ. ಕೋವಿಡ್ ನಿಂದಾಗಿ ನೇರಪ್ರವಚನದ ಬದಲಾಗಿ ಆನ್‍ಲೈನ್ ಪ್ರವಚನವನ್ನು ಆಯೋಜಿಸಲಾಗಿದ್ದು, ಈ ಬಾರಿ ಶೃಂಗೇರಿ ಶ್ರೀಗಳು ಪ್ರವಚನ ನೀಡಿದ್ದಾರೆ. ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು