Friday, January 24, 2025
ಪುತ್ತೂರು

ಸೃಜನಶೀಲತೆಯಿಂದ ಯೋಚಿಸಿದಾಗ ಹೊಸ ಕಲ್ಪನೆಗಳು ಬರಲು ಸಾಧ್ಯ; ಶೇಖರ್ ಐಯ್ಯರ್-ಕಹಳೆ ನ್ಯೂಸ್

ಪುತ್ತೂರು : ಕೌಶಲ್ಯ, ಜ್ಞಾನ ಮತ್ತು ವರ್ತನೆಯೊಂದಿಗೆ ಭಾಷಾ ಕೌಶಲ್ಯ ಮುಖ್ಯವಾಗಿರುತ್ತದೆ. ವಾಣಿಜ್ಯ ವ್ಯವಹಾರದಲ್ಲಿ ಆಂಗ್ಲಭಾಷೆ ಅತೀಅಗತ್ಯವಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದರೊಂದಿಗೆ ಕಂಪ್ಯೂಟರ್ ಬಗೆಗಿನ ಮಾಹಿತಿಯೊಂದಿಗೆ ವ್ಯವಹಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ನಿವಾರಿಸುವ ಕಲೆಯನ್ನು ಕಲಿತಿರಬೇಕು ಎಂದು ವಿವೇಕಾನಂದ ಸ್ಕೂಲ್ ಆಫ್ ಮಾನೇಜ್‍ಮೆಂಟ್ ಸ್ಟಡೀಸ್‍ನ ನಿರ್ದೇಶಕ ಡಾ. ಶೇಖರ್ ಎಸ್. ಐಯ್ಯರ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಹಾಗೂ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಮಾನೇಜ್ಮೆಂಟ್ ಅಸೋಸಿಯೇಷನ್’ಅನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು. ಚೌಕಟ್ಟಿನಿಂದ ಹೊರಬಂದು ನವೀನತೆ ಮತ್ತು ಸೃಜನಶೀಲತೆಯಿಂದ ಯೋಚಿಸಿದಾಗ ಹೊಸ ಕಲ್ಪನೆಗಳು ಬರಲು ಸಾಧ್ಯ. ಒಂದು ಸಮಸ್ಯೆಗೆ ಹಲವು ಪರಿಹಾರಗಳಿರುತ್ತದೆ. ಆದ್ದರಿಂದ ಬೇರೆ ಬೇರೆ ತೆರನಾಗಿ ಯೋಚಿಸಿ ಸರಳ ಪರಿಹಾರ ಕಂಡುಕೊಳ್ಳಬಹುದು. ಅದರೊಂದಿಗೆ ಸಂಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುವ ಚಾಕಚಕ್ಯತೆ ಹೊಂದಿರಬೇಕು ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಮಾನೇಜ್ಮೆಂಟ್ ವಿದ್ಯಾರ್ಥಿಗಳು ತರಗತಿಯಲ್ಲಿನ ಪಾಠದ ಹೊರತಾಗಿ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಒಂದು ವಿಷಯದ ಮೂಲವನ್ನು ತಿಳಿದು ಅದನ್ನು ಅರ್ಥೈಸಿಕೊಂಡು ಕಾರ್ಯಗತಗೊಳಿಸುವತ್ತ ಗಮನಹರಿಸಬೇಕು. ಧನಾತ್ಮಕ ಚಿಂತೆಯೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆದರೆ ಎಂತಹ ಕೆಲಸವನ್ನೂ ಸಾಧಿಸಲು ಸಾಧ್ಯ ಎಂದು ಹೇಳಿದರು. ವಿದ್ಯಾರ್ಥಿ ಓಂಕಾರ್ ಪ್ರಾರ್ಥಿಸಿ, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಸ್ವಾಗತಿಸಿದರು. ಉಪನ್ಯಾಸಕಿ ಅನ್ನಪೂರ್ಣ ವಂದಿಸಿ, ವಿದ್ಯಾರ್ಥಿ ಜ್ಞಾನೇಶ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು