ಪುತ್ತೂರು : ಜೀವನವೆಂಬುದು ಅನಿರೀಕ್ಷಿತಗಳನ್ನು ಹೊಂದಿರುವ ಸರಮಾಲೆ, ನಾವು ಅಂದುಕೊಂಡಂತೆ ಎಂದಿಗೂ ಜೀವನ ಇರುವುದಿಲ್ಲ. ಹಾಗೆಯೇ ಕೊರೊನ ಎಂಬ ಮಹಾಮಾರಿ ಬಂದು ಎಲ್ಲ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯೊಂದಿಗೆ ಸಂಕಷ್ಟವನ್ನು ತರಿಸಿದೆ.
ಈ ರೀತಿಯಲ್ಲಿ ಸಮಸ್ಯೆಗಳು ಅನಿರೀಕ್ಷಿತವಾಗಿ ಬಂದರೂ ಆ ಸವಾಲುಗಳನ್ನು ಎದುರಿಸುವ ಪ್ರಯತ್ನ ಮಾಡಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾಕುಮಾರಿ ಟಿ. ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ ‘ಮಣಿಕರ್ಣಿಕ ಮಾತುಗಾರರ ವೇದಿಕೆ’ಗೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಗುರುವಾರ ಮಾತನಾಡಿದರು. ಆರ್ಥಿಕ ಚಟುವಟಿಕೆಗಳ ಮೇಲೆ ಕೊರೊನ ಯಾವ ರೀತಿಯಲ್ಲಿ ಹೊಡೆತ ಬೀರಿದೆಯೋ ಅದೇ ರೀತಿಯಲ್ಲಿ ಶೈಕ್ಷಣಿಕ ಕ್ಷೇತ್ರವನ್ನೂ ಕುಗ್ಗಿಸಿದೆ. ಅಂತಹ ಸಮಯದಲ್ಲಿ ತಾಂತ್ರಿಕ ವ್ಯವಸ್ಥೆಗಳು ಹೆಚ್ಚು ರೂಪುಗೊಂಡು ಶೈಕ್ಷಣಿಕ ವರ್ಷವನ್ನು ಹಾಳುಮಾಡಲಿಲ್ಲ. ಆನ್‍ಲೈನ್ ತರಗತಿಯಲ್ಲಿ ಅನೇಕ ಸಾಧಕ ಬಾಧಕಗಳಿತ್ತು. ಹೀಗೆ ನಮ್ಮನ್ನು ನಾವು ಪ್ರೀತಿಸುವುದರೊಂದಿಗೆ ಸೃಜನಶೀಲರನ್ನಾಗಿ ಮಾಡಬೇಕು. ವ್ಯಕ್ತಿತ್ವವನ್ನು ಉನ್ನತ್ತ ಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು ಎಂದು ನುಡಿದರು. ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ ಆರ್ ನಿಡ್ಪಳ್ಳಿ ಹಾಗೂ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ಸೌಜನ್ಯ ಬಿ.ಎಂ. ಉಪಸ್ಥಿತರಿದ್ದರು. ‘ಆನೈನ್ ತರಗತಿ, ನೆಟ್‍ವರ್ಕ್ ಅಧೋಗತಿ’ ಎಂಬ ವಿಷಯದ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ವಿನಿತಾ, ಆಶಿತಾ, ತನುಶ್ರೀ, ಕಾರ್ತಿಕ್, ಧನ್ಯ, ಶುಭ್ರ, ನಿರೀಕ್ಷಾ, ಕೃತಿ, ಶಶಿಧರ್, ಚರಿಷ್ಮಾ, ಶ್ರೀರಾಮ, ಸಂದೀಪ್, ಹಾಗೂ ಹಿರಿಯ ವಿದ್ಯಾರ್ಥಿಗಳಾದ ಸವಿತಾ ನಾರಂಪಾಡಿ, ಮತ್ತು ಜಯಶ್ರೀ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ತೃತೀಯ ಬಿ.ಎ. ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ಶಶಿಧರ್ ಮತ್ತು ಚರಿಷ್ಮಾ ಉತ್ತಮ ಮಾತುಗಾರರಾಗಿ ಹಾಗೂ ಮೂರು ವರುಷದ ಪತ್ರಿಕೋದ್ಯಮ ತರಗತಿಯವರು ಸಮಾನ ಭಾಗವಹಿಸುವಿಕೆಯೊಂದಿಗೆ ಚಾಂಪಿಯನ್‍ಶಿಪ್ ಹಂಚಿಕೊಂಡರು. ತೃತೀಯ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿ ಆಶಿತಾ ಸ್ವಾಗತಿಸಿ, ಸುತನ್ ಕೇವಳ ವಂದಿಸಿದರು. ಗೌತಮ್ ಕಾರ್ಯಕ್ರಮ ನಿರೂಪಿಸಿದರು.