Friday, January 24, 2025
ಪುತ್ತೂರು

ಪ್ರಕೃತಿಯಲ್ಲಿನ ಹೊಸತನವನ್ನು ಹೊರಹಾಕಬೇಕು ; ದೀಪಕ್ ನಾಯ್ಕ್-ಕಹಳೆ ನ್ಯೂಸ್

ಪುತ್ತೂರು : ಪ್ರತಿದಿನ ನಾವು ಪ್ರಕೃತಿಯನ್ನು ಅನ್ವೇಷಿಸುತ್ತ ಹೋದಾಗೆ ಹಲವು ವಿಷಯಗಳು ಸಿಗುತ್ತದೆ, ಅದರಿಂದ ಸಂಶೋಧನೆಯು ಅಭಿವೃದ್ಧಿ ಗೊಳ್ಳುವುದರಲ್ಲಿ ಸಂಶಯವಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸದಾಗಿ ಏನಾದರೂ ಕಂಡಾಗ ಅದರ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಯಾವುದೇ ವಸ್ತುವನ್ನು ವೀಕ್ಷಿಸಿದ ಕೂಡಲೇ ಆದನ್ನು ನೋಡಿದ ಬೇರೊಬ್ಬ ರಲ್ಲಿ ಕೇಳಿ ಹೆಚ್ಚಿನ ಅನುಭವದ ಮಾತುಗಳು ಪಡೆಯುವುದು ಸೂಕ್ತ. ಸಂಶೋಧನೆಗೆ ‘ನೆಚರ್ ಕ್ಲಬ್’ ಉನ್ನತ ರೀತಿಯಲ್ಲಿ ಸಹಾಯ ಮಾಡುತ್ತದೆ, ಇದರಲ್ಲಿ ಸ್ಪಷ್ಟವಾಗಿ ಸಂಶೋಧಿಸಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಮತ್ತು ಸಂಶೋಧನಾ ವಿದ್ಯಾರ್ಥಿ ದೀಪಕ್ ನಾಯ್ಕ್ ಹೇಳಿದರು. ಅವರು ಕಾಲೇಜಿನ ‘ನೇಚರ್ ಕ್ಲಬ್’ನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.  ನರಸಿಂಹ ಭಟ್ ಮಾತನಾಡಿ, ಪ್ರಕೃತಿಯಿಂದ ಹಲವಾರು ಪ್ರಯೋಜನಗಳನ್ನು ಪಡೆಯುತ್ತಿರುವ ನಾವು ಗೌರವ ಕೊಡುವುದನ್ನು ಎಂದಿಗೂ ಮರೆಯಬಾರದು. ಪುಸ್ತಕದ ಜ್ಞಾನ ದೊಂದಿಗೆ ಪ್ರಕೃತಿಯ ಪಾಠವನ್ನು ತಿಳಿಯುವುದು ಉತ್ತಮ. ಹಾಗೇ ಪ್ರಕೃತಿಯಲ್ಲಿ ಪ್ರತಿಯೊಂದು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು ಅದನ್ನು ವಿವಿಧ ರೀತಿಯಲ್ಲಿ ಅಧ್ಯಯನ ಮಾಡಬೇಕು ಎಂದು ನುಡಿದರು. ನೇಚರ್ ಕ್ಲಬ್ ಸಂಯೋಜಕಿ ಡಾ. ಸ್ಮಿತಾ ಪಿ. ಜಿ. ಮಾತನಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ನೆಚರ್ ಕ್ಲಬ್ ನಾಯಕ ಗುರುಕುಮಾರ್, ಕಾರ್ಯದರ್ಶಿ ಪ್ರತಿಕ್ಷಾ ಕೆ.ಎಲ್., ಜಂಟಿ ಕಾರ್ಯದರ್ಶಿ ಪ್ರೀತಮ್ ಉಪಸ್ಥಿತರಿದ್ದರು. ತೃತೀಯ ಬಿ.ಎಸ್ಸಿ ಸಾಯಿರೂಪ ಮತ್ತು ವೀಣಾಶಾರದ ಪ್ರಾರ್ಥಿಸಿ, ಮೋನಿಷ ಎ.ಎಂ ಸ್ವಾಗತಿಸಿದರು. ಶೈನಿ ಕೆ.ಆರ್. ವಂದಿಸಿ, ನಿಶಿತಾ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು.