Friday, January 24, 2025
ಹೆಚ್ಚಿನ ಸುದ್ದಿ

ಭಾರತದಲ್ಲಿ ಮಾನವ ರಹಿತ ಗಗನಯಾನ ಯೋಜನೆ 2021 ರ ಡಿಸೆಂಬರ್‌ನಲ್ಲಿ ಆರಂಭ-ಕಹಳೆ ನ್ಯೂಸ್

ನವದೆಹಲಿ: ಭಾರತದಲ್ಲಿ ಮೊಟ್ಟ ಮೊದಲ ಮಾನವ ರಹಿತ ಗಗನಯಾನ ಯೋಜನೆ 2021 ರ ಜನವರಿಯಲ್ಲಿ ಆರಂಭವಾಗಲಿದೆ ಎಂದು ಸೋಮವಾರ ಬಜೆಟ್ ಮಂಡನೆಯ ವೇಳೆ ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್ ಹೇಳಿದ್ದಾರೆ.

ಅವರು ‘ಇಸ್ರೋ ಕೈಗೊಳ್ಳಲಿರುವ ಮಹಾತ್ವಾಕಾಂಕ್ಷೆಯ ದೇಶದ ಪ್ರಪ್ರಥಮ ಮಾನವ ಸಹಿತ ಗಗನಯಾನ ಯೋಜನೆಯ ಭಾಗವಾಗಿ ನಾಲ್ಕು ಜನ ಗಗನಯಾನಿಗಳು ರಷ್ಯಾದಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, 2022 ರ ವೇಳೆಗೆ ಮಾನವ ಸಹಿತ ಗಗನಯಾನವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ’ ಎಂದು ಹೇಳಿ, ಇದರ ಪ್ರಾಯೋಗಿಕವಾಗಿ ಈ ವರ್ಷದ ಕೊನೆಯಲ್ಲಿ ಮಾನವ ರಹಿತ ವಿಮಾನಯಾನ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು. 2022 ಕ್ಕೆ ಭಾರತ 75 ನೇ ಸ್ವಾತಂತ್ಕ್ಯ ದಿನಾಚರಣೆ ಆಚರಿಸಲಿದ್ದು, ಈ ಮಹತ್ವದ ವರ್ಷದಲ್ಲೇ ಭಾರತದ ಮಹತ್ವಾಕಾಂಕ್ಷಿ ಗಗನಯಾನ ಕೂಡ ಆರಂಭವಾಗಲಿದೆ. ಈಗಾಗಲೇ ಇದೇ ವಿಚಾರವಾಗಿ ಇಸ್ರೋ ಕೂಡ ಕಾರ್ಯನಿರತವಾಗಿದ್ದು, ಯೋಜನೆಯ ಪ್ರಮುಖ ಮತ್ತು ನಿರ್ಣಾಯಕ ಮಾನವ ಸಹಿತ ಗಗನಯಾನ ಯೋಜನೆಯನ್ನು ಆರು ತಿಂಗಳ ಬಳಿಕ ಅಂದರೆ 2020 ರ ಡಿಸೆಂಬರ್ ನಲ್ಲಿ ಚಾಲನೆ ನೀಡಲು ಯೋಜಿಸಲಾಗಿತ್ತು. ಇದೀಗ ಈ ಯೋಜನೆಯ ಡೆಡ್ ಲೈನ್ 2022ಕ್ಕೆ ಮುಂದೂಡಿದೆ. ಕೇವಲ ಗಗನಯಾನ ಮಾತ್ರವಲ್ಲದೇ ಚಂದ್ರಯಾನ-3 ಸೇರಿದಂತೆ ಇಸ್ರೋದ ಬಹಳಷ್ಟು ಯೋಜನೆಗಳೂ ಕೂಡ ಕೊರೋನಾ ಸಾಂಕ್ರಾಮಿಕದಿ0ದಾಗಿ ಮುಂದೂಡಲ್ಪಟ್ಟಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು