Friday, January 24, 2025
ಹೆಚ್ಚಿನ ಸುದ್ದಿ

ಕೋವಿಡ್-19 ಲಸಿಕೆ ಜಾಗತಿಕ ಬೇಡಿಕೆ ಹೆಚ್ಚಳದ ಪರಿಣಾಮವಾಗಿ 2 ಶತಕೋಟಿ ಡೋಸ್ ಲಸಿಕೆ ಉತ್ಪಾದನೆ: ಬಯೋಎನ್‌ಟೆಕ್ ಕಹಳೆ ನ್ಯೂಸ್

ಜರ್ಮನಿ: ಕೋವಿಡ್-19 ಲಸಿಕೆ ಜಾಗತಿಕ ಬೇಡಿಕೆ ಹೆಚ್ಚಳದ ಪರಿಣಾಮವಾಗಿ 2 ಶತಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುವ ಯೋಜನೆಯನ್ನು ಜರ್ಮನ್ ಮೂಲದ ಔಷದ ತಯಾರಿಕಾ ಕಂಪೆನಿ ಬಯೋಎನ್‌ಟೆಕ್ ಪ್ರಕಟಿಸಿದೆ.

ಈ ಹಿಂದೆ 2021 ದ ಅವಧಿಯಲ್ಲಿ 130 ಕೋಟಿ ನಿರ್ಧಾರಿಸಿತ್ತು ಆದರೆ ಇದಕ್ಕಿಂದ 50 ಶೇ. ಹೆಚ್ಚು ಉತ್ಪಾದಿಸಲು ಯೋಜಿಸಿದ್ದು 200 ಕೋಟಿ ಡೋಸ್ ಉತ್ಪಾದಿಸಲು ಯೋಜಿಸಲಾಗಿದೆ. ಅಮೆರಿಕಾ ಮೂಲದ ಫೈಝರ್ ಸಹಯೋಗದಲ್ಲಿ ಬಯೋಎನ್‌ಟೆಕ್ ಕೊರೊನಾ ಲಸಿಕೆ ಅಭಿವೃದ್ಧಿ ಪಡಿಸಿದ್ದು ‘ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಬೆಲ್ಜಿಯಂ ಪೂರಸ್‌ನಲ್ಲಿರುವ ಫೈಝರ್ ಘಟಕದಲ್ಲಿ ಉತ್ಪಾದನಾ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು