Monday, January 20, 2025
ಹೆಚ್ಚಿನ ಸುದ್ದಿ

ಹಸು ತೊಳೆಯಲು ಹೋಗಿದ್ದ ಬಾಲಕ ಹಾಗೂ ಮಹಿಳೆ ಕೆಸರಲ್ಲಿ ಮುಳುಗಿ ಸಾವು – ಕಹಳೆ ನ್ಯೂಸ್

ರಾಮನಗರ: ಹಸುವಿನ ಮೈತೊಳೆಯಲು ಹೋಗಿದ್ದ ಬಾಲಕ ಹಾಗೂ ಅವನನ್ನು ಕಾಪಾಡಲು ಹೋದ ಮಹಿಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕನಕಪುರದ ಹುಣಸೆಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಜಮೀನಿನ ಹೊಂಡದಲ್ಲಿ ಹಸುವನ್ನು ತೊಳೆಯಲು ಹೋಗಿದ್ದ ಬಾಲಕ ಕಸಬಾ ಹೋಬಳಿಯ ಹುಣಸೆಮರದೊಡ್ಡಿ ಗ್ರಾಮದ ಹನ್ನೋದು ವರ್ಷದ ಬಾಲಕ ದೀಪು ಹಾಗೂ ಆತನ ಸಂಬ0ಧಿಯಾದ ಭಾರತಿ(3೦) ಎಂದು ಗುರುತಿಸಲಾಗಿದೆ. ಬಾಲಕ ಕಾಲು ಜಾರಿ ನೀರು ಪಾಲಾಗುತ್ತಿರುವುದನ್ನು ಕಂಡ ಭಾರತಿ ಬಾಲಕನನ್ನು ಪಾರುಮಾಡಲು ಹೋಗಿ ಇಬ್ಬರು ಕೆಸರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹೊಂಡದ ಕೆಸರಿನಲ್ಲಿ ಮುಳುಗುತ್ತಿದ್ದ ಇರ್ವರನ್ನು ರಕ್ಷಿಸಲು ಊರವರು ಮುಂದಾದರಾದರು ಪ್ರಯೋಜನವಾಗಲಿಲ್ಲ. ಈ ಬಗ್ಗೆ ಕಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದ್ದು, ಪೊಲೀಸರು ಶವ ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ. ಪ್ರರಣದ ತನಿಖೆ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು