Recent Posts

Monday, January 20, 2025
ಪುತ್ತೂರು

ಪುಸ್ತಕಗಳನ್ನು ಓದುವ ಪರಿಪಾಠ ಮಾಡಿಕೊಳ್ಳುವುದು ಒಳ್ಳೆಯದು; ಡಾ. ಶ್ರೀಧರ್ ಹೆಚ್.ಜಿ-ಕಹಳೆ ನ್ಯೂಸ್

ಪುತ್ತೂರು : ಒಬ್ಬ ಸಾಹಿತ್ಯ ವಿದ್ಯಾರ್ಥಿ ಹಲವು ಪುಸ್ತಕಗಳನ್ನು ಓದುವ ಪರಿಪಾಠ ಮಾಡಿಕೊಳ್ಳಬೇಕು. ಆಗ ಮಾತ್ರ ಆತನಿಗೆ ವಿವಿಧ ರೀತಿಯ ಶೈಲಿ, ಕಥೆಯ ಬೆಳವಣಿಗೆ, ಭಾಷೆ ಪರಿಚಯವಾಗಲು ಸಾಧ್ಯವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಆತನ ಬರವಣಿಗೆಯ ಕೌಶಲ್ಯವು ಅಭಿವೃದ್ಧಿ ಹೊಂದುತ್ತದೆ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಹೆಚ್. ಜಿ ಹೇಳಿದರು. ಅವರು ಇಲ್ಲಿನ ಕನ್ನಡ ಸಂಘ ಮತ್ತು ಕನ್ನಡ ವಿಭಾಗಗಳ ಆಶ್ರಯದಲ್ಲಿ ತೃತೀಯ ಐಚ್ಛಿಕ ಕನ್ನಡದ ವಿದ್ಯಾರ್ಥಿಗಳು ಆಯೋಜಿಸುವ ‘ಸಾಹಿತ್ಯ ಮಂಟಪ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶುಕ್ರವಾರ ಮಾತನಾಡಿದರು. ಬರಹ ಅನ್ನುವುದು ಲೇಖಕನ ಅನುಭವ, ಪ್ರವೇಶ ಮತ್ತು ವ್ಯಕ್ತಿತ್ವದ ಪ್ರತಿರೂಪವಾಗಿರುತ್ತದೆ. ಆದ್ದರಿಂದ ಆತ ಲೇಖನದಲ್ಲಿ ಹಲವು ಅರ್ಥಗಳ ಜೊತೆಗೆ ಜೀವನದ ಮನೋಧರ್ಮವನ್ನು ಕೂಡ ತಿಳಿಸಿಕೊಡಬೇಕು. ಆಗ ಮಾತ್ರ ಬರಹ ಓದುಗರ ಮನಸ್ಸನ್ನು ತಲ್ಲಣಗೊಳಿಸಲು ಸಾಧ್ಯವಾಗುತ್ತದೆ ಎಂದು ನುಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘದ ಸಂಯೋಜಕಿ ಡಾ. ಗೀತಾ ಕುಮಾರಿ ಟಿ. ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಬರಹ ಬರೆಯಲು ಸಾಕಷ್ಟು ಅವಕಾಶಗಳು ಲಭಿಸುತ್ತದೆ, ಅದನ್ನು ತನ್ನದೇ ಆದ ಶೈಲಿಯಲ್ಲಿ ಸದುಪಯೋಗ ಮಾಡಿಕೊಳ್ಳುಬೇಕು. ಆಗ ಮಾತ್ರ ಉತ್ತಮ ಬರಹಗಾರರಾಗಿ ಹೊರ ಹೊಮ್ಮಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಯುವ ಕವಿಗಳಾದ ಚೆನ್ನ ಬಸವ, ಸಂದೀಪ್ ಎಸ್., ಆಶಾ, ಸ್ಬಾತಿ, ಸೌಜನ್ಯ. ಬಿ.ಎಂ. ಕೆಯ್ಯೂರು, ಶಿವಪ್ರಿಯ ಸ್ವರಚಿತ ಲೇಖನ, ಕವನ ಮತ್ತು ಕಥೆಗಳನ್ನು ವಾಚಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಚೆನ್ನಬಸವ ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಶುಭ್ರ ಮತ್ತು ಕೃತಿ ಪ್ರಾರ್ಥಿಸಿದರು. ತೃತೀಯ ಐಚ್ಛಿಕ ಕನ್ನಡ ವಿದ್ಯಾರ್ಥಿನಿ ಚರಿಷ್ಮಾ  ಡಿ.ಜಿ. ಸ್ವಾಗತಿಸಿ, ಹರ್ಷಿತಾ ಎಸ್.ವಿ. ವಂದಿಸಿದರು. ಕನ್ನಡ ಸಂಘದ ಜತೆ ಕಾರ್ಯದರ್ಶಿ ಶಶಿಧರ್ ಕಾರ್ಯಕ್ರಮವನ್ನು ನಿರೂಪಿಸಿದರು.