Recent Posts

Monday, January 20, 2025
ಬೆಂಗಳೂರು

ಕೆಜಿಎಫ್ 2 ಸಿನೆಮಾದ ಬಿಡುಗಡೆ ದಿನವನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಲು ಯಶ್ ಅಭಿಮಾನಿಗಳಿಂದ ಮೋದಿಗೆ ಮನವಿ-ಕಹಳೆ ನ್ಯೂಸ್

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗುತ್ತಿದ್ದಂತೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಹು ನಿರೀಕ್ಷೆಯ ಕೆಜಿಎಫ್ ಚಾಪ್ಟರ್-2 ಸಿನೆಮಾವು ಜುಲೈ 16 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾವನ್ನು ನೋಡುವುದಕ್ಕಾಗಿ ಜುಲೈ 16ನ್ನು ರಾಷ್ಟ್ರೀಯ ರಜೆಯ ದಿನವನ್ನಾಗಿ ಘೋಷಿಸಬೇಕು ಎಂದು ಯಶ್ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಓನ್ಲಿ ಯಶ್ ಹೆಸರಿನ ಟ್ವೀಟರ್ ಖಾತೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳು ಪ್ರಧಾನಿಯನ್ನು ಟ್ಯಾಗ್ ಮಾಡಿರುವ ಈ ಮನವಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು