Recent Posts

Monday, January 20, 2025
ಹೆಚ್ಚಿನ ಸುದ್ದಿ

ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ ಕುಲಕರ್ಣಿ ಸೇರಿ ಇತರ ಇಬ್ಬರ ವಿರುದ್ದ ಆರೋಪಪಟ್ಟಿ ದಾಖಲು-ಕಹಳೆ ನ್ಯೂಸ್

ನವದೆಹಲಿ : ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಇತರ ಇಬ್ಬರ ವಿರುದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಆರೋಪಪಟ್ಟಿ ದಾಖಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿನಯ ಕುಲಕರ್ಣಿ ಅಲ್ಲದೇ, ಶಿವಾನಂದ ಬಿರಾದಾರ್ ಮತ್ತು ಚಂದ್ರಶೇಖರ ಇಂಡಿ ಅವರ ವಿರುದ್ದ ಧಾರವಾಡದಲ್ಲಿನ ವಿಶೇಷ ಕೋರ್ಟ್‍ನಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. 2016ರಲ್ಲಿ ಪಂಚಾಯತ್ ಚುನಾವಣೆಗೆ ಸಂಬಂಧಪಟ್ಟಂತೆ ಮೃತನೊಂದಿಗೆ ಆರೋಪಿಗಳು ರಾಜಕೀಯ ಮತ್ತು ವೈಯುಕ್ತಿಕ ದ್ವೇಷ ಹೊಂದಿದ್ದು, ಮಾಜಿ ಸಚಿವರು ತಮ್ಮ ಸಹಚರರೊಂದಿಗೆ ಸೇರಿ ಸಂಚು ನಡೆಸಿದ್ದರು. ಆದರೆ, ಸಹಚರರ ಪೈಕಿ ಓರ್ವ ಕೃತ್ಯ ಎಸಗಿದ್ದ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ . ಅಲ್ಲದೇ ಈ ಬಗ್ಗೆ ಮಾಹಿತಿ ನೀಡಿದ ಸಿಬಿಐ ವಕ್ತಾರ ಆರ್.ಸಿ.ಜೋಷಿ, ಅವರು ಭೂ ವಿವಾದದ ಕಾರಣ ಈ ಕೃತ್ಯ ನಡೆದಿದೆ ಎಂದು ಬಿಂಬಿಸಲಾಗಿತ್ತು. ಆದರೆ ಘಟನೆಗೆ ಸಂಬಂಧಿಸಿದಂತೆ ಮೂರು ನಾಡ ಪಿಸ್ತೂಲ್ ಅನ್ನು ಸಿಬಿಐ ಜಪ್ತಿ ಮಾಡಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಕೃತ್ಯ ನಡೆಸಿದವರು ಬೆಂಗಳೂರಿನಿಂದ ಆಗಮಿಸಿದ್ದು, ವಿನಯ ಕುಲಕರ್ಣಿ ಅವರ ಆಪ್ತರು ಮಾಲೀಕರಾಗಿದ್ದ ರೆಸಾರ್ಟ್‍ವದರಲ್ಲಿ ಜೂನ್ 7, 2016ರಂದು ತಂಗಿದ್ದರು. ಆ ದಿನವೇ ಹತ್ಯೆ ಮಾಡಲು ಮೊದಲ ಯತ್ನ ನಡೆದಿತ್ತು ಎಂಬುದಾಗಿ ಆರೋಪಟ್ಟಿಯಲ್ಲಿ ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು