Recent Posts

Monday, January 20, 2025
ಬೆಂಗಳೂರು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೋಜನ ಕೂಟಕ್ಕೆ ಹಲವು ಶಾಸಕರು ಗೈರು-ಕಹಳೆ ನ್ಯೂಸ್

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಂಗಳವಾರ ರಾತ್ರಿ ಕರೆದಿದ್ದ ಭೋಜನ ಕೂಟಕ್ಕೆ ಹಲವು ಶಾಸಕರು ಮತ್ತು ಸಚಿವರು ಗೈರಾಗಿದ್ದರು.

ವಿಧಾನಮಂಡಲ ಅಧಿವೇಶನದ ಕಾರಣ ಮುಖ್ಯಮಂತ್ರಿಯವರ ನಿವಾಸ ಕಾವೇರಿ ಯಲ್ಲಿ ಭೋಜನ ಕೂಟ ಆಯೋಜಿಸಲಾಗಿದ್ದು, ಈ ಭೋಜನ ಕೂಟಕ್ಕೆ ಬಸನಗೌಡ ಪಾಟೀಲ ಯತ್ನಾಳ, ಅಪ್ಪಚ್ಚುರಂಜನ್, ಅರವಿಂದ ಬೆಲ್ಲದ, ಸುನಿಲ್ ಕುಮಾರ್, ತಿಪ್ಪಾರೆಡ್ಡ ಹಾಗೂ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಆನಂದ್ ಸಿಂಗ್, ಕೆ.ಎಸ್.ಈಶ್ವರಪ್ಪ, ಹಾಜರಾಗಿರಲಿಲ್ಲ. ಈ ಪೈಕಿ ಸುನಿಲ್ ಕುಮಾರ್ ಪಕ್ಷದ ಕಾರ್ಯದ ನಿಮಿತ ಕೇರಳಕ್ಕೆ ತೆರಳಿದ್ದು, ತಿಪ್ಪಾರೆಡ್ಡಿಯವರು ಪಂಚಮಸಾಲಿ ಸ್ವಾಮೀಜಿಗಳ ಪಾದಯಾತ್ರೆ ಚಿತ್ರದುರ್ಗಕ್ಕೆ ಬಂದಿರುವ ಕಾರಣ ಅಲ್ಲಿಗೆ ಹೋಗಿದ್ದಾರೆ. ಇನ್ನು ಇದು ಕೇವಲ ಭೋಜನ ಕೂಟವಾದ ಕಾರಣ ಯಾರೊಬ್ಬರಿಗೂ ಚರ್ಚೆಗೆ ಅವಕಾಶವಿರಲಿಲ್ಲ. ಶಾಸಕರು ಒಬ್ಬೊಬ್ಬರಾಗಿ ಬಂದು ಹೋಗಿದ್ದು ಮುಖ್ಯಮಂತ್ರಿ ಎಲ್ಲರ ಬಳಿ ಕುಶಲೋಪರಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು