ಪುತ್ತೂರು : ಶಾಂತಿಗೋಡಿನಲ್ಲಿ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಮೂವರಲ್ಲಿ ಒಬ್ಬರು ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ವ್ಯಕ್ತಿ ಮುಂಡೂರು ಗ್ರಾಮದ ಕಡ್ಯ ತೌಡಿಂಜ ನಿವಾಸಿ ಕಾಂತರ ಎಂದು ತಿಳಿದುಬಂದಿದೆ. ಕಾಂತರ ಮತ್ತು ಅವರ ಪುತ್ರ ಹಾಗೂ ಅಳಿಯ ಸೇರಿ ಶಾಂತಿಗೋಡು ಕುಮಾರಧಾರ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದರು. ಮೀನಿಗೆ ಗಾಳ ಹಾಕುತ್ತಿದ್ದ ಕಾಂತರ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕಣ್ಮರೆಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.