Sunday, November 24, 2024
ಪುತ್ತೂರು

ಮೇ 15ರಿಂದ 21 ರವರೆಗೆ ಜೀರ್ಣೋದ್ಧಾರಗೊಳ್ಳುತ್ತಿರುವ ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಬ್ರಹ್ಮಕಲಶೋತ್ಸವ-ಕಹಳೆ ನ್ಯೂಸ್

ಪುತ್ತೂರು : ಜೀರ್ಣೋದ್ಧಾರಗೊಳ್ಳುತ್ತಿರುವ ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೇ 15ರಿಂದ 21 ರವರೆಗೆ ನಡೆಯಲಿದ್ದು ಈ ಪ್ರಯುಕ್ತ ಭಕ್ತರ ಸಭೆ ಭಾನುವಾರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ನಳಿನಿ ಲೋಕಪ್ಪ ಗೌಡ ಕರೆಮನೆ ಮಾತನಾಡಿ, ದೇವಸ್ಥಾನದ ನಿರ್ಮಾಣದಲ್ಲಿ ಗ್ರಾಮಸ್ಥರ ಸಹಕಾರ ಮುಖ್ಯ. ಎಲ್ಲರೂ ಏಕಮನಸ್ಸಿನಿಂದ ದೇವತಾ ಕಾರ್ಯದಲ್ಲಿ ಶ್ರಮಿಸಿದಾಗ ಭವ್ಯ ದೇಗುಲದ ನಿರ್ಮಾಣ ಸಾಧ್ಯವಿದೆ. ಸರ್ವೆಯ ಸುಂದರ ದೇಗುಲದ ನಿರ್ಮಾಣಕ್ಕೆ ನಮ್ಮ ಕೈಯಿಂದ ಸಾಧ್ಯವಾಗುವ ನೆರವು ನೀಡೋಣ ಎಂದರು. ಮೋಹನ್ ರೈ ಓಲೆಮುಂಡೋವು 5 ಲಕ್ಷ ರೂ. ದೇಣಿಗೆ : ಕೈಯೂರು ಮಹಿಷಾಮರ್ದಿನಿ ದೇವಸ್ಥಾನದ ಮಾಜಿ ಮೊಕ್ತೇಸರ ಕೆ.ಮೋಹನ್ ರೈ ಓಲೆಮುಂಡೋವು ಮಾತನಾಡಿ, ಗ್ರಾಮದ ದೇವಸ್ಥಾನ ನಿರ್ಮಾಣದಲ್ಲಿ ಪಾಲ್ಗೊಳ್ಳುವುದು ಪುಣ್ಯಕಾರ್ಯ. ಒಗ್ಗಟ್ಟಿನಲ್ಲಿ ಕೆಲಸ ಮಾಡಿದಾಗ ದೇವಸ್ಥಾನದ ಕೆಲಸ ಕಾರ್ಯಗಳು ವೇಗವಾಗಿ ಸಾಗಲು ಸಾಧ್ಯ ಎಂದರು. ಈಗಾಗಲೇ ದೇವಸ್ಥಾನಕ್ಕೆ ತೀರ್ಥಬಾವಿ ನಿರ್ಮಿಸಿಕೊಟ್ಟಿದ್ದು, ಮುಂದಿನ ಕೆಲಸಗಳಿಗಾಗಿ 5 ಲಕ್ಷ ರೂ. ದೇಣಿಗೆ ನಿಡುವುದಾಗಿ ಘೋಷಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಈವರೆಗೆ ನಡೆದಿರುವ ಕಾಮಗಾರಿ ಮತ್ತು ಮುಂದೆ ನಡೆಯಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಕೋವಿಡ್ ಸಂಕಷ್ಟದ ಸಮಯದಲ್ಲೂ ಶಾಸಕರ ಅನುದಾನ ಮತ್ತು ಭಕ್ತರ ದೇಣಿಗೆಯೊಂದಿಗೆ ಕೆಲಸಗಳು ನಿರ್ವಿಘ್ನವಾಗಿದೆ ಸಾಗಿದೆ. ಇನ್ನು ಮೂರು ತಿಂಗಳ ಒಳಗೆ ಭವ್ಯ ದೇಗುವ ನಿರ್ಮಾಣವಾಗಬೇಕಿರುವುದರಿಂದ ಅವಿರತ ಶ್ರಮ ಅಗತ್ಯ. ಊರಿನವರು ಮಾತ್ರವಲ್ಲದೆ ಪರವೂರಿನವರಿಗೂ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಬೇಕು. ಊರಿನ ಹಬ್ಬದಂತೆ ಮುಂದಿನ ಕಾರ್ಯಗಳು ಸಮರೋಪಾದಿಯಲ್ಲಿ ಭಕ್ತರ ನೆರವಿನೊಂದಿಗೆ ಸಾಗಲಿದೆ ಎಂದರು. ಮಾರ್ಗದರ್ಶಕ ಲೋಕಪ್ಪ ಗೌಡ ಕರೆಮನೆ, ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಅರ್ಚಕ ಶ್ರೀರಾಮ ಕಲ್ಲೂರಾಯ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಆನಂದಪೂಜಾರಿ ಸರ್ವೆದೋಳ, ಜೀರ್ಣೋದ್ದಾರ ಸಮಿತಿ ಮತ್ತು ವ್ಯವಸ್ಥಾಪನ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.