ಪುತ್ತೂರಿನ ದೇವಸ್ಯ ಎಂಬಲ್ಲಿ ಫೆಬ್ರವರಿ 5 ರಿಂದ 15 ವರೆಗೆ ವಾಹನ ಸಂಚಾರ ಸ್ಥಗಿತ, ಬದಲಿ ಸಂಚಾರ ವ್ಯವಸ್ಥೆಗೆ ಲೋಕೋಪಯೋಗಿ ಇಲಾಖೆ ಸೂಚನೆ-ಕಹಳೆ ನ್ಯೂಸ್
ಪುತ್ತೂರು : ಪುತ್ತೂರು ತಾಲೂಕು ಆರ್ಯಾಪು ಗ್ರಾಮ ವ್ಯಾಪ್ತಿಯ ದೇವಸ್ಯ ಎಂಬಲ್ಲಿ ಕಿರಿದಾದ ಸೇತುವೆಯ ಅಗಲೀಕರಣದ ಹಿನ್ನಲೆ 11 ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಸುಬ್ರಹ್ಮಣ್ಯ ಹಾಗೂ ಮಂಜೇಶ್ವರ ರಾಜ್ಯ ಹೆದ್ದಾರಿಯ ದೇವಸ್ಯ ಎಂಬಲ್ಲಿ ಸೇತುವೆ ಅಗಲೀಕರಣ ಕಾಮಗಾರಿ ಹಿನ್ನಲೆ ಫೆಬ್ರವರಿ 5 ರಿಂದ 15 ರ ವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್‍ಗೆ ಪತ್ರ ಬರೆದಿದ್ದು ‘ಸೇತುವೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲು ಬದಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಾಗಿ’ ಅನುವು ಮಾಡಿಕೊಂಡಿದೆ.
ಲಘು ವಾಹನಗಳು ಬಪ್ಪಳಿಗೆ-ಬಲ್ನಾಡು-ಬೊಬ್ಬಿಲಿ-ಅಟ್ಲಾರು-ದೇವಸ್ಯ ರಸ್ತೆಯಾಗಿ ಸಂಚರಿಸಬಹುದು ಇಲ್ಲವೇ ಸಂಪ್ಯ-ಒಳತ್ತಡ್ಕ-ದೇವಸ್ಯ ಮುಖೇನಾ ಸಂಚರಿಸ ಬಹುದಾಗಿದ್ದು, ಘನ ವಾಹನಗಳು ಕಬಕ-ವಿಟ್ಲ-ಉಕ್ಕುಡ-ಮಂಜೇಶ್ವರ ರಸ್ತೆಯಾಗಿ ಸಂಚರಿಸ ಬೇಕಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.