Friday, January 24, 2025
ಹೆಚ್ಚಿನ ಸುದ್ದಿ

ಫೆಬ್ರವರಿ 19ಕ್ಕೆ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ ಕಾಲಿವುಡ್‍ನ ನಟ ವಿಶಾಲ್, ಅಭಿನಯದ ‘ಚಕ್ರ’ ಸಿನಿಮಾ-ಕಹಳೆ ನ್ಯೂಸ್

ಹೈದರಬಾದ್ : ಫೆಬ್ರವರಿ 19ಕ್ಕೆ ಪ್ರಪಂಚದಾದ್ಯಂತ ಎಂಎಸ್ ಆನಂದನ್ ನಿರ್ದೇಶನದ, ಕಾಲಿವುಡ್‍ನ ಖ್ಯಾತ ನಟ ವಿಶಾಲ್ ಹಾಗೂ ನಟಿ ಶೃದ್ಧಾ ಶ್ರೀನಾಥ್ ಅಭಿನಯದ ‘ಚಕ್ರ’ ಸಿನಿಮಾ ಬಿಡುಗಡೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ನಟ ವಿಶಾಲ್, ಫೆಬ್ರುವರಿ 19ಕ್ಕೆ ಸಿನಿಮಾ ಬಿಡುಗಡೆಯ ದಿನಾಂಕ ಪಕ್ಕಾ ಆಗಿದ್ದು, ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿರುವ ಚಕ್ರವನ್ನು ಫೆಬ್ರುವರಿ 19ಕ್ಕೆ ಬಿಡುಗಡೆ ಮಾಡಲಾಗುವುದು. ಇದು ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದೊಂದು ಭವ್ಯ ವರ್ಷಕ್ಕೆ ಭವ್ಯ ಆರಂಭ ಎಂದು ವಿಶಾಲ್ ಹೇಳಿದ್ದು, ಚಕ್ರ ಸಿನಿಮಾವು ಸೈಬರ್ ಅಪರಾಧ ಹಿನ್ನೆಲೆಯುಳ್ಳದಾಗಿದ್ದು, ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ವಿಶಾಲ್ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.