Saturday, November 23, 2024
ಪುತ್ತೂರು

ಎನ್‍ಡಿಎ ಸ್ಕಾಲರ್ ಶಿಪ್‍ಗೆ ಆಯ್ಕೆಯಾದ ಅಂಬಿಕಾ ಪಿಯು ವಿದ್ಯಾರ್ಥಿ ಯಶ್ವಿನ್ ಪದವಿ ಶಿಕ್ಷಣದ ನಂತರ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಉದ್ಯೋಗ-ಕಹಳೆ ನ್ಯೂಸ್

ಪುತ್ತೂರು : ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುವ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಯಶ್ವಿನ್ ಎಸ್ ಸಾಲ್ಯಾನ್ ಕೇಂದ್ರ ಸರ್ಕಾರ ಆಯಾ ರಾಜ್ಯಗಳ ಮೂಲಕ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಸಂಬಂಧಿಸಿದಂತೆ ನಡೆಸುವ ‘ಪ್ರಿ ಸ್ಕಾಲರ್‍ಶಿಪ್ ಟೆಸ್ಟ್ ಫಾರ್ ಎನ್‍ಡಿಎ’ ಪರೀಕ್ಷೆಯನ್ನು ತೇರ್ಗಡೆಗೊಂಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರನ್ವಯ ಪ್ರತೀ ತಿಂಗಳು ಒಂಬತ್ತು ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ. ಈ ವಿದ್ಯಾರ್ಥಿ ವೇತನ ಪದವಿ ಶಿಕ್ಷಣ ಪೂರೈಸುವವರೆಗೂ ದೊರೆಯಲಿದ್ದು, ತದನಂತರ ಅಧ್ಯಯನ ನಡೆಸಲಿರುವ ಪದವಿಗೆ ಅನುಗುಣವಾಗಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಉದ್ಯೋಗ ಪ್ರಾಪ್ತವಾಗಲಿದೆ. ಈ ಪರೀಕ್ಷೆ ಪ್ರತಿ ಮೂರು ವರ್ಷಗಳಿಗೊಮ್ಮೆ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಆಯೋಜನೆಗೊಳ್ಳುತ್ತದೆ. ಪ್ರೌಢಶಾಲಾ ಶಿಕ್ಷಣದಲ್ಲಿ ಎನ್‍ಸಿಸಿ ಘಟಕಕ್ಕೆ ಸೇರಿರುವ ವಿದ್ಯಾರ್ಥಿಗೆ ಈ ಪರೀಕ್ಷೆ ಎದುರಿಸುವ ಅವಕಾಶ ಇರುತ್ತದೆ. ಪರೀಕ್ಷೆಯ ನಂತರ ವಿವಿಧ ಕ್ಯಾಂಪ್‍ಗಳು ಕೂಡ ಆಯೋಜನೆಗೊಳ್ಳುತ್ತವೆ. ಪರೀಕ್ಷೆ ಹಾಗೂ ಕ್ಯಾಂಪ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ಈ ಸ್ಕಾಲರ್ ಶಿಪ್‍ಗೆ ಆಯ್ಕೆಯಾಗುತ್ತಾರೆ. ರಾಜ್ಯದಿಂದ ಸುಮಾರು ಎಂಟುನೂರು ಮಂದಿ ಪರೀಕ್ಷೆ ಬರೆದಿದ್ದು ನಲವತ್ತೇಳು ಮಂದಿಗೆ ಸ್ಕಾಲರ್‍ಶಿಪ್ ದೊರೆತಿರುತ್ತದೆ. ಯಶ್ವಿನ್ ಸಾಧನೆಗೆ ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಪ್ರಾಂಶುಪಾಲ ಶಂಕರನಾರಾಯಣ ಭಟ್ ಹಾಗೂ ಉಪನ್ಯಾಸಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್ವಿನ್ ಅವರು ಕುಶಾಲನಗರದಲ್ಲಿ ಪೋಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶೇಷಪ್ಪ ಬಿ.ಸಿ. ಹಾಗೂ ಶೋಭಾ ಬಿ.ಎನ್ ದಂಪತಿ ಪುತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು