Friday, January 24, 2025
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ‘ಮದಿಪು’ ಚಿತ್ರ ಪ್ರದರ್ಶನ ಹಾಗೂ ಕಾರ್ಯಾಗಾರ, ಜೀವನದಲ್ಲಿ ಸೋಲು ಪ್ರಮುಖ ಪಾತ್ರವನ್ನು ವಹಿಸುತ್ತದೆ; ಚೇತನ್ ಮುಂಡಾಡಿ-ಕಹಳೆ ನ್ಯೂಸ್

ಪುತ್ತೂರು : ವಿದ್ಯಾರ್ಥಿ ಜೀವನವನ್ನು ಅತ್ಯಂತ ಸಂತೋಷದಿಂದ ಕಳೆಯಬೇಕು, ಹಾಗೆಯೇ ಸಿಕ್ಕ ಸಮಯವನ್ನು ಸದೋಪಯೋಗಪಡಿಸಿಕೊಂಡು ತಮ್ಮ ಗುರಿಯತ್ತ ಸಾಗಬೇಕು. ಜೀವನದಲ್ಲಿ ಗೆಲುವಿಗಿಂತ ಸೋಲು ಅತೀ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಾಕೆಂದರೆ ಸೋಲು ನಮ್ಮಲ್ಲಿ ಛಲವನ್ನು ಹೆಚ್ಚಿಸಿ, ಸದೃಢ ವ್ಯಕ್ತಿಯಾನ್ನಾಗಿಸುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿರ್ದೇಶಕ ಚೇತನ್ ಮುಂಡಾಡಿ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜು, ಪದವಿ ಮತ್ತು ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾದ ‘ಫಿಲ್ಮ್ ಮೇಕಿಂಗ್’ ಕುರಿತಾದ ಕಾರ್ಯಾಗಾರ ‘ಮದಿಪು’ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ನಟನೆ ಹೇಳಿಕೊಡುವುದು ಸುಲಭವಾಗಿರುತ್ತದೆ, ಆದರೆ ಅದರಲ್ಲಿ ತೋಡಗಿಕೊಂಡಿರುವವನಿಗೆ ಅದರ ಕಷ್ಟ ಗೊತ್ತಿರುತ್ತದೆ. ಒಂದು ಸಿನಿಮಾದಲ್ಲಿ ಬರವಣಿಗೆ, ನಟನೆ, ಛಾಯಗ್ರಹಣ, ಇವೆಲ್ಲವು ಚೆನ್ನಾಗಿದ್ದಾರೆ ಮಾತ್ರ ಚಿತ್ರವು ಉತ್ತಮವಾಗಿ ಮೂಡಿ ಬರಲು ಸಾಧ್ಯ . ಸಿನೆಮಾದ ಕಥೆ ಜನರ ಊಹೆಗೂ ನಿಲುಕದ ವಿಷಯವನ್ನು ಹೊಂದಿದ್ದಾಗ ಅದು ಜನರನ್ನು ಬೇಗನೆ ಆಕರ್ಷಿಸುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಪ್ರಶಸ್ತಿ ಪುರಸ್ಕøತ ನಟ, ಪತ್ರಕರ್ತ ಎಂ.ಕೆ ಮಠ ಮಾತನಾಡಿ, ನಿವೃತ್ತಿ ಇಲ್ಲದ ಉದ್ಯೋಗವೆಂದರೆ ಅದು ಪತ್ರಿಕೋದ್ಯಮ. ನಮ್ಮ ಕೊನೆಯುಸಿರು ಇರುವ ತನಕ ನಾವು ಪತ್ರಕರ್ತರಾಗಿರುತ್ತವೆ. ಒಬ್ಬ ನಟನಿಗೆ ಅರ್ಪಣಾ ಮನೋಭಾವವು ಅತೀ ಮುಖ್ಯವಾಗಿರುತ್ತದೆ. ಅವನಿಗೆ ತನಗೆ ಸಿಕ್ಕಿರುವ ಪಾತ್ರದ ಮೇಲೆ ಅಭಿಮಾನವಿಟ್ಟು ಆ ಪಾತ್ರಕ್ಕೆ ಜೀವ ತುಂಬಬೇಕು. ವಿದ್ಯಾರ್ಥಿಗಳೂ ಅಷ್ಟೇ! ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಾಗ, ವಹಿಸಿದ ಕಾರ್ಯವನ್ನು ಒಪ್ಪವಾಗಿ ಪೂರ್ಣಗೊಳಿಸಿದಾಗ ಮಾತ್ರ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್, ಬಾಲ್ಯದಿಂದಲೇ ನಮ್ಮ ಆಸಕ್ತಿಯನ್ನು ಗುರುತಿಸಿಕೊಂಡು, ಅದರಲ್ಲಿ ಏನಾನ್ನಾದರೂ ಸಾಧನೆ ಮಾಡುವತ್ತ ಶ್ರಮ ವಹಿಸಬೇಕು. ಸಿನಿಮಾವನ್ನು ಕೇವಲ ಮನರಂಜನೆಗಾಗಿ ನೋಡದೆ, ಅದರ ಒಳನೋಟವನ್ನು ಅರಿಯಲು ಪ್ರಯತ್ನಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ. ಆರ್. ನಿಡ್ಪಳ್ಳಿ, ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸುಶ್ಮಿತಾ ಜಯಾನಂದ್, ಪ್ರಜ್ಞಾ ಬಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶುಬ್ರಾ, ವಿದ್ಯಾ, ನಿರೀಕ್ಷಾ, ಪ್ರಾರ್ಥಿಸಿದರು. ಸ್ನಾತ್ತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಅಕ್ಷತ್ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪನ್ಯಾಸಕಿ ಸೀಮಾ ಪೋನಡ್ಕ ವಂದಿಸಿದರು. ವಿದ್ಯಾರ್ಥಿಗಳಾದ ಅರ್ಪಿತಾ ಕುಂದರ್ ಮತ್ತು ಅರುಣ್ ಕಿರಿಮಂಜೇಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು.