Saturday, January 25, 2025
ಪುತ್ತೂರು

ವಿವೇಕಾನಂದದಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ-ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 2020-21ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯು ನಡೆಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಮಯೂರ್ ಬಿ.ಜಿ ಆಯ್ಕೆಯಾದರು. ಇವರು ಬಲ್ನಾಡಿನ ಬಂಗಾರಡ್ಕದ ಬಿ.ಎಸ್. ಗಂಗಾಧರ್ ಮತ್ತುಕೆ.ಡಿ.ಗಾಯತ್ರಿ ದಂಪತಿಗಳ ಪುತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು

ದ್ವಿತೀಯ ವಿಜ್ಞಾನ ವಿಭಾಗದ ಕ್ಷಿತೀಜ್ ಎಚ್.ಎಸ್ ಸಂಘದ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು.ಈ ತನು ನೆಹರೂ ನಗರದ ಹರಿಪ್ರಸಾದ್ ಡಿ. ಎಸ್ ಮತ್ತು ಸುಚಿತಾ ಪಿ.ಎಂ ರವರ ಪುತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು

ಜತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಶ್ರೇಯಾ ಪಿ ಆಯ್ಕೆಯಾದರು.ಇವರು ಬಂಟ್ವಾಳ ತಾಲೂಕಿನ ಕುಳಾದ ದಿ.ನಾರಾಯಣ ಪೂಜಾರಿ ಮತ್ತು ಪುಷ್ಪ ದಂಪತಿಗಳ ಪುತ್ರಿ.

ಕ್ರೀಡಾ ಸಂಘದ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಜೀವನ್ ಸಿ.ಕೆ ಅವರು ಆಯ್ಕೆಯಾಗಿದ್ದಾರೆ. ಇತನು ಮೈಸೂರಿನ ಕೆ.ಆರ್ ನಗರದ ಕೃಷ್ಣ ಸಿ.ಟಿ ಮತ್ತು ಪ್ರೇಮ ದಂಪತಿಗಳ ಪುತ್ರ.

ಕ್ರೀಡಾ ಜತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಐಶ್ವರ್ಯ ಎಮ್. ವೈ ಆಯ್ಕೆಯಾದರು. ಇವರು ಕೊಡಗಿನ ಸೋಮವಾರ ಪೇಟೆಯ ಯೋಗಾನಂದ ಎಂ.ಡಿ. ಮತ್ತು ಶಶಿಕಲಾ ದಂಪತಿಗಳ ಪುತ್ರಿ.

ವಿದ್ಯಾರ್ಥಿ ಕ್ಷೇಮ ಪಾಲಕರಾದ ವಿಶ್ವನಾಥ್ ಕೆ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಕ್ರೀಡಾ ಸಂಘದ ಚುನಾವಣೆಯನ್ನು ದೈಹಿಕ ಶಿಕ್ಷಣ ನಿದೇರ್ಶಕರಾದ ಡಾ. ಜ್ಯೋತಿಕುಮಾರಿ ಅವರು ನಡೆಸಿಕೊಟ್ಟರು. ಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿ ಸಂಘದ ನಾಯಕರನ್ನು ಅಭಿನಂದಿಸಿದರು.