Friday, January 24, 2025
ಹೆಚ್ಚಿನ ಸುದ್ದಿ

ಭಾರತದಿಂದ ವಿದೇಶಗಳಿಗೆ ಇಲ್ಲಿಯವರೆಗೆ 56 ಲಕ್ಷ ಡೋಸ್ ಕೊರೊನಾ ಲಸಿಕೆ ಉಡುಗೊರೆ-ಕಹಳೆ ನ್ಯೂಸ್

ನವದೆಹಲಿ : ವಿದೇಶಾಂಗ ಸಚಿವಾಲಯವು ಎರಡು ಕೊರೊನಾ ಲಸಿಕೆಗಳು ಬಳಕೆಗೆ ಅನುಮೋದನೆ ನೀಡಿರುವ ಭಾರತ, ವಿದೇಶಗಳಿಗೆ ಸುಮಾರು 56 ಲಕ್ಷ ಡೋಸ್ ಲಸಿಕೆಯನ್ನು ಉಡುಗೊರೆಯಾಗಿ ಮತ್ತು 100 ಲಕ್ಷ ಡೋಸ್ ಲಸಿಕೆಗಳನ್ನು ವಾಣಿಜ್ಯ ಸರಬರಾಜು ಮಾಡಿರುವುದಾಗಿ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಭಾರತದ ಲಸಿಕೆಗಳು ಪೆಸಿಫಿಕ್ ದ್ವೀಪ ರಾಷ್ಟ್ರಗಳು, ಕೆರಿಬಿಯನ್ ದೇಶಗಳು, ಅಫ್ಘಾನಿಸ್ತಾನ, ಮಂಗೋಲಿಯಾ ಹಾಗೂ ನಿಕರಾಗುವಾಗೆ ಲಸಿಕೆಗಳು ಮುಂದಿನ ವಾರಗಳಲ್ಲಿ ತಲುಪಲಿದೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ನಾವು ಭೂತಾನ್ ಸೇರಿದಂತೆ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಬಹ್ರೇನ್, ಒಮನ್, ಭೂತಾನ್, ಈಜಿಪ್ಟ್, ಬಾಂಗ್ಲಾದೇಶ, ಅಲ್ಜೀರಿಯಾ, ಮಾಲ್ಡೀವ್ಸ್, ಯುಎಇ, ಕುವೈತ್ ಮಾರಿಷಸ್, ಸೀಶೆಲ್ಸ್, ಬ್ರೆಜಿಲ್, ಮೊರಾಕೊ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಲಸಿಕೆಗಳನ್ನು ಪೂರೈಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ಅನುದಾನದ ಮೊತ್ತದಲ್ಲಿ 56 ಲಕ್ಷ ಡೋಸ್ ಲಸಿಕೆ ಮತ್ತು 100 ಲಕ್ಷ ಡೋಸ್ ಲಸಿಕೆಗಳನ್ನು ವಾಣಿಜ್ಯ ಸರಬರಾಜು ಮಾಡಲಾಗಿದೆ ಹಾಗೂ ಭಾರತ ಜ. 19ರಂದು ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಗೆ ಕೊರೊನಾ ಲಸಿಕೆಗಳನ್ನು ಅನುದಾನದ ನೆರವಿನ ಮುಖಾಂತರ ಸರಬರಾಜು ಮಾಡಲಾಗುವುದು ಎಂದು ಪ್ರಕಟಪಡಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು