Friday, January 24, 2025
ಹೆಚ್ಚಿನ ಸುದ್ದಿ

12,100 ಕೋಟಿ ರೂ ಕೃಷಿ ಸಾಲ ಮನ್ನಾ ; ತಮಿಳುನಾಡು ಸರ್ಕಾರ ಘೋಷಣೆ-ಕಹಳೆ ನ್ಯೂಸ್

ಚೆನ್ನೈ : ತಮಿಳುನಾಡು ಸರ್ಕಾರ 12,100 ಕೋಟಿ. ರೂ ಮೊತ್ತದ ಕೃಷಿ ಸಾಲ ಮನ್ನಾ ಮಾಡುವುದಾಗಿ ಶುಕ್ರವಾರ ಘೋಷಣೆ ಮಾಡಿದೆ. ವಿಧಾನಸಭೆಯಲ್ಲಿ ಸಿಎಂ ಕೆ.ಪಳನಿಸ್ವಾಮಿ ಅವರು ಈ ಸಾಲ ಮನ್ನಾ ಯೋಜನೆಯಿಂದ ರಾಜ್ಯದ 16.43 ಲಕ್ಷ ರೈತರಿಗೆ ಲಾಭವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಕ್ಷಣದಿಂದ ಈ ಯೋಜನೆಯು ಜಾರಿಗೆ ಬರಲಿದೆ. ಶೀಘ್ರದಲ್ಲೇ ಅವಶ್ಯವಿರುವ ಅನುದಾನವನ್ನು ಒದಗಿಸಲಾಗುವುದು ಎಂದು ಹೇಳಿದರು. ಎಐಎಡಿಎಂಕೆವು, ನೀಡಿರುವ ಭರವಸೆಗಳನ್ನು ಈಡೇರಿಸುವುದರೊಂದಿಗೆ ನೂತನ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಏಕೈಕ ಪಕ್ಷವಾಗಿದೆ ಎಂದು ತಿಳಿಸಿದರು. ಡಿಎಂಕೆ ವಿರುದ್ದ ವಾಗ್ದಾಳಿ ನಡೆಸಿರುವ ಅವರು, ಡಿಎಂಕೆ ಪಕ್ಷವು, ಅರ್ಹ ರೈತರಿಗೆ ತಲಾ 2 ಎಕರೆ ಜಮೀನನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ನೀಡಿರುವ ಭರವಸೆಯನ್ನು ಈಡೇರಸಲು ಅದು ವಿಫಲವಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು