Friday, January 24, 2025
ಪುತ್ತೂರು

ಸೈನಿಕರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ; ಡಾ. ಮನಮೋಹನ ಎಂ.-ಕಹಳೆ ನ್ಯೂಸ್

ಪುತ್ತೂರು : ತ್ಯಾಗದ ದೊಡ್ಡ ಪ್ರತೀಕವೇ ಯೋಧರು. ಯೋಧರಿಗೆ ಸಿಗುವ ಗೌರವಗಳು ಬೇರೆ ಯಾರಿಗೂ ಸಿಗಲು ಸಾಧ್ಯವಿಲ್ಲ. ಸೈನಿಕರಿಗೆ ನಾವು ಯಾವ ರೀತಿಯಲ್ಲಿ ಪ್ರೀತಿ ತೋರಿಸುತ್ತೆವೆಯೊ ಅದೇ ರೀತಿಯಲ್ಲಿ ಅವರ ಕುಟುಂಬಕ್ಕೂ ತೋರಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಯುದ್ದ ಇಲ್ಲದೆ ಯೋಧನಿಲ್ಲ; ಯೋಧನಿಲ್ಲದೆ ಬದುಕಿಲ್ಲ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ. ಹೇಳಿದರು. ಅವರು ಕಾಲೇಜಿನ ಐಕ್ಯೂಎಸಿ ಹಾಗೂ ಪತ್ರಿಕೋದ್ಯಮ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಬುಧವಾರ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ. ಆರ್. ನಿಡ್ಪಳ್ಳಿ ಮತ್ತು ಸೀಮಾ ಪೋನಡ್ಕ, ಮಣಿಕರ್ಣಿಕ ಮಾತುಗಾರರ ವೇದಿಕೆಯ ಜತೆಕಾರ್ಯದರ್ಶಿ ಸುಕನ್ಯ ಎನ್. ಆರ್. ಉಪಸ್ಥಿತರಿದ್ದರು. ‘ಸಲಾಂ ವೀರ ಯೋಧರೆ’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಾದ ತನುಶ್ರೀ, ಆಶಿತಾ, ಕಾರ್ತಿಕ್, ಮಂಜುನಾಥ್, ಶುಭ್ರ ಪುತ್ರಕಳ, ಸಂದೀಪ್ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪ್ರಥಮ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿ ಮಂಜುನಾಥ್ ವಾರದ ಉತ್ತಮ ಮಾತುಗಾರನಾಗಿ ಮತ್ತು ಪ್ರಥಮ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಉತ್ತಮ ಮಾತುಗಾರರ ತಂಡವಾಗಿ ಬಹುಮಾನ ಪಡೆದುಕೊಂಡರು. ತೃತೀಯ ಬಿ. ಎ. ಪತ್ರಿಕೋದ್ಯಮ ವಿದ್ಯಾರ್ಥಿನಿ ಚೈತ್ರಾ ಪಿ. ಸ್ವಾಗತಿಸಿ, ವಿದ್ಯಾರ್ಥಿ ಶಶಿಧರ್ ನಾಯ್ಕ್ ವಂದಿಸಿದರು. ವಿದ್ಯಾರ್ಥಿನಿ ಚರಿಷ್ಮಾ ಡಿ.ಜಿ. ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು