Tuesday, January 21, 2025
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ಐಸಿಟಿ ಅಕಾಡೆಮಿಯಿಂದ ‘ಗೆಟ್ ಸೆಟ್ ಗೊ ಇಂಡಕ್ಷನ್’ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಕಾಲೇಜಿನ ಫ್ಲೇಸ್‍ಮೆಂಟ್ ಮತ್ತು ಟ್ರೈನಿಂಗ್ ಸೆಲ್ ನವರು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಅನ್ ಲೈನ್ ನಲ್ಲಿ ಆಯೋಜಿಸಿದ ಐಸಿಟಿ ಅಕಾಡೆಮಿಯ ‘ಗೆಟ್ ಸೆಟ್ ಗೊ ಇಂಡಕ್ಷನ್’ ಕಾರ್ಯಕ್ರಮ ಶನಿವಾರ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಟಾಟಾ ಸಲಹಾ ಸೇವೆಯ ಮಾನವ ಸಂಪನ್ಮೂಲ ಅಧಿಕಾರಿ ವಾಸುದೇವನ್ ಆರ್. ಮಾತನಾಡಿ ಕ್ಷೇತ್ರ ಕಾರ್ಯಗಳಿಗೆ ಹೋದಾಗ ವಿವಿಧ ಕೌಶಲ್ಯಗಳು ಬೇಕಾಗುತ್ತದೆ. ಆದರೆ ಕೆಲವೊಂದು ಸಮಯದಲ್ಲಿ ಕೌಶಲ್ಯಗಳು ಇದ್ದರೂ ಅದನ್ನು ಬಳಕೆ ಮಾಡುವ ಶೈಲಿ ತಿಳಿದಿರಬೇಕು. ಯಾವ ಕೆಲಸ ಮಾಡಿದರು ಅದರಲ್ಲಿ ವಿಶ್ವಾಸ ಇರಬೇಕು. ಭಾಷೆ ಬಳಕೆ ಮತ್ತು ಸಂವಹನ ಪ್ರಕ್ರಿಯೆಗಳು ಉತ್ತಮವಿದ್ದರೆ ಯಶಸ್ಸು ನಮ್ಮದಾಗುತ್ತದೆ ಎಂದು ಹೇಳಿದರು. ಅಕ್ಸೆಂಚರ್ ನ ಹಿರಿಯ ತಂತ್ರಜ್ಞ ಮಹೇಶ್ ನಾರಾಯಣ್ ಮಾತನಾಡಿ, ತಂತ್ರಜ್ಞಾನಗಳು ಯಾವ ರೀತಿಯಲ್ಲಿ ಬದಲಾಗುತ್ತಿರುತ್ತದೆಯೋ ಅದೇ ರೀತಿಯಲ್ಲಿ ಅದರೊಂದಿಗೆ ನಾವು ನಡೆಯಬೇಕು. ಯಾವುದೇ ಕೆಲಸವನ್ನು ಸ್ವಯಂಚಾಲಿತವಾಗಿ ನಿರ್ವಹಣೆ ಮಾಡಲು ತಿಳಿದಿರಬೇಕು ಎಂದು ನುಡಿದರು. ಹೆಕ್ಸ್ವ್‍ರ್ಸಿಟಿ ಹೆಕ್ಸಾವೇರ್ ಟೆಕ್ನಾಲಜಿಯ ಪ್ರಮುಖ ತಂತ್ರಜ್ಞ ವಿಶ್ವೇಶ್ವರ ಕೆ.ಸಿ. ಮಾತನಾಡಿ, ಪ್ರತಿಯೊಂದು ವಿಷಯಗಳಲ್ಲಿ ಭಾಗವಹಿಸುವಿಕೆ ಮುಖ್ಯವಾದರೆ, ಅದರೊಂದಿಗೆ ಶಿಸ್ತು ನಮ್ಮ ಜೀವನದಲ್ಲಿ ಅಮೂಲ್ಯವಾದ ಬದಲಾವಣೆಯನ್ನು ತರಬಹುದು. ತ್ಯಾಗ ಮತ್ತು ಸಮಗ್ರತೆಗಳಿಂದ ಜೀವನ ಕೂಡಿರಬೇಕು. ಇದೆಲ್ಲ ಜೀವನದ ದೊಡ್ಡ ಸವಾಲುಗಳು ಎಂದು ಹೇಳಿದರು. ಹೆಚ್. ಆರ್. ಸೋಪ್ರ ಸ್ಟೆರಿಯಾದ ಸಹಾಯಕ ಉಪಾಧ್ಯಕ್ಷೆ ಸಬಿತಾ ಜೆ. ಮಾತನಾಡಿ, ಕೊರೊನದ ನಂತರ ಬಿಕ್ಕಟ್ಟಿನಿಂದ ತರಗತಿಗಳು ನಡೆಯುತ್ತಿರುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಹೊಸ ಪ್ರಭಾವಗಳು ಬೀರಿದೆ. ಉದ್ಯೋಗಗಳಲ್ಲಿ ಹಲವು ಭಿನ್ನತೆಗಳು ಉಂಟಾಗಿದೆ. ಸಧ್ಯದ ಪರಿಸ್ಥಿತಿಗಳಲ್ಲಿ ಕೆಲವು ಕ್ಷೇತ್ರದಲ್ಲಿ ಉನ್ನತ ಅವಕಾಶಗಳು ಒದಗಿಬರುತ್ತಿದೆ ಎಂದರು. ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಹೊಸತರಲ್ಲಿ ಅವಕಾಶಗಳು ನಮ್ಮನ್ನು ಹುಡುಕಿ ಬರುತ್ತದೆ. ಎಲ್ಲ ಅವಕಾಶಗಳು ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳುವುದು ಮುಖ್ಯ. ಗೊಂದಲಗಳಿದ್ದಾಗ ಪರಿಹಾರ ಮಾಡಿಕೊಳ್ಳಬೇಕು. ಜೀವನ ಶೈಲಿಗಳಲ್ಲಿ ಬದಲಾವಣೆ ಮುಖ್ಯವಾಗಿ ಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಐಸಿಟಿ ಅಕಾಡೆಮಿಯ ಚೀಫ್ ಎಕ್ಸಿಕ್ಯೂಟೀವ್ ಆಫಿಸರ್ ಎಂ. ಶಿವಕುಮಾರ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು