Monday, January 20, 2025
ಪುತ್ತೂರು

ಸತತ ಪರಿಶ್ರಮ ಮತ್ತು ಸಂಸ್ಕಾರದಿಂದ ಕೂಡಿದ ಜೀವನ ನಮ್ಮದಾಗಿರಬೇಕು; ರಾಜ್ ಮನೋಹರ್-ಕಹಳೆ ನ್ಯೂಸ್

ಪುತ್ತೂರು : ವಿದ್ಯಾಥಿಗಳಿಗೆ ಸಣ್ಣ ವಯಸ್ಸಿನಲ್ಲಿರುವಾಗ ಶಿಕ್ಷಣಕ್ಕಿಂತ ಇತರ ವಿಷಯಗಳಲ್ಲೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಯುವಕರಿಗೆ ಉತ್ತಮ ಜ್ಞಾನದ ಜೊತೆಗೆ ಶ್ರದ್ಧೆ, ಸಹನೆ, ನಡತೆಯಿಂದ ಕೂಡಿದ ಜೀವನ ಅತೀ ಮುಖ್ಯವಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ದಿನನಿತ್ಯದ ದಿನಚರಿಯಿಂದ ಹಾಗೂ ಶಿಸ್ತಿನಿಂದ ಕೂಡಿದ ಜೀವನದಿಂದ ನಮ್ಮ ಬದುಕು ಸುಗಮವಾಗುತ್ತದೆ ಎಂದು ಯಚ್.ಎಸ್.ಯಮ್. ಹಾಸನದ ಎ1 ಲೈಫ್ ಕೇರ್ ಟೆಕ್ನಾಲಾಜಿ ಸಹಸಂಸ್ಥಾಪಕ ಮತ್ತು ಸಿನಿಯರ್ ಇಂಜಿನಿಯರ್, ರಾಜ್ ಮನೋಹರ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಐಕ್ಯೂಏಸಿ ಘಟಕ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗ ವತಿಯಿಂದ ಆಯೋಜಿಸಲಾದ ‘ಟೆಕ್ನೂಕನೆಕ್ಟ್’ ಕಾರ್ಯಕ್ರಮದಲ್ಲಿ ‘ಐಟಿ ಟ್ರೈನಿಂಗ್ ಸೆಲ್’ನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ನಾವು ಸೇವಿಸುವ ಆಹಾರವು ನಮ್ಮ ಮನಸ್ಸನ್ನು ನಿಯಂತ್ರಿಸಬೇಕು. ಅಂತಹ ಸ್ವಾತಿಕ ಆಹಾರವನ್ನು ನಾವು ಸೇವನೆ ಮಾಡಬೇಕು. ಆಹಾರ ಸಂಸ್ಕøತಿಗೆ ನಮ್ಮ ಬದುಕನ್ನು ಬದಲಾವಣೆಗೊಳಿಸುವ ಶಕ್ತಿಯಿದೆ. ಸತತ ಪರಿಶ್ರಮದಿಂದ ಮತ್ತು ಸಂಸ್ಕಾರದಿಂದ ಕೂಡಿದ ವಿದ್ಯಾರ್ಥಿ ಜೀವನ ನಮ್ಮದಾಗಬೇಕು.ದೇಶದ ಆಸ್ತಿ ಹಣವಲ್ಲ, ದೇಶದ ಆಸ್ತಿ ನಿಜವಾದ ಆಸ್ತಿ. ಜ್ಞಾನವನ್ನು ನಾವು ಹೆಚ್ಚಾಗಿ ಹೂಡಿಕೆ ಮಾಡಬೇಕು ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸೇಡಿಯಾಪು ಜನಾರ್ಧನ ಭಟ್ ಮಾತನಾಡಿ, ಟೆಕ್ನಾಲಾಜಿ ಬೆಳಿಯುದರ ಜೊತೆಗೆ ಕೃಷಿ ಕೂಡ ಬೆಳೆಯಬೇಕು, ಹೊಸ ಹೊಸ ತಂತ್ರಜ್ಞಾನವನ್ನು ಕೃಷಿಯ ಮೇಲೆ ಪ್ರಯೋಗ ಮಾಡಬೇಕು ಹಾಗೇಯೆ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವ ವಿನೂತನ ಆಲೋಚನೆಗಳನ್ನು ಮಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಪ್ರೊ, ವಿಷ್ಣು ಗಣಪತಿ ಭಟ್ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಶ್ರೀನಿಧಿ ಉಪಸ್ಥಿತರಿದ್ದರು. ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್ ಸ್ವಾಗತಿಸಿ, ವಿದಾರ್ಥಿನಿ ಅನುಷಾ ಕೆ. ಎಮ್. ಪ್ರಾರ್ಥಿಸಿದರು. ವಿದ್ಯಾರ್ಥಿ ಚಂದನ್ ಎಂ. ವಂದಿಸಿ, ಅಮೂಲ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು