Monday, January 20, 2025
ಪುತ್ತೂರು

ಮನೆಯಲ್ಲಿ ಶುರುವಾದ ಜವಾಬ್ದಾರಿಯು ಸಾಮಾಜಿಕ ಜವಬ್ದಾರಿಯನ್ನು ನಿಭಾಯಿಸುವುದನ್ನು ತಿಳಿಸುತ್ತದೆ; ವಿದ್ಯಾ ಎಸ್.-ಕಹಳೆ ನ್ಯೂಸ್

ಪುತ್ತೂರು : ಸಮಾಜದ ದೃಷ್ಟಿಯಲ್ಲಿ ಹೆಣ್ಣು ಗಂಡು ಸಮಾನವೆಂದರೂ ಹೆಣ್ಣಿಗೆ ಜವಬ್ದಾರಿಯು ತುಸು ಜಾಸ್ತಿಯಾಗಿರುತ್ತದೆ. ಆದುದರಿಂದ ಹೆಣ್ಣು ಜವಬ್ದಾರಿಯನ್ನು ಹೇರಿದಾಗ ಅದನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎಂಬುದನ್ನು ಅರ್ಥೈಯಿಸಿಕೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆಯಲ್ಲಿ ಶುರುವಾದ ಜವಾಬ್ದಾರಿಯು ಸಮಾಜದಲ್ಲಿ, ಸಾಮಾಜಿಕ ಜವಬ್ದಾರಿಯನ್ನು ನಿಭಾಯಿಸುವುದನ್ನು ತಿಳಿಸುತ್ತದೆ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್. ಹೇಳಿದರು. ಅವರು ಕಾಲೇಜಿನ ಮಹಿಳಾ ಘಟಕ ಮತ್ತು ವ್ಯವಹಾರ ಆಡಳಿತ ವಿಭಾಗದಿಂದ ಆಯೋಜಿನ ಮಹಿಳೆ ಮತ್ತು ಸಾಮಾಜಿಕ ಜವಬ್ದಾರಿ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಶುಕ್ರವಾರ ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳು ತನ್ನ ಫೋಟೋಗಳನ್ನು ಹಾಕುವಾಗ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಮುಂದಿನ ದಿನಗಳಲ್ಲಿ ಅದೇ ಸಮಸ್ಯೆಗಳಾಗಿ ಎದುರಾಗಬಹುದು. ನಮ್ಮ ಸಮಾಜದಲ್ಲಿ ಪ್ರತಿಯೊಂದು ತಪ್ಪಿಗೂ ಹೆಣ್ಣಿನ ಕಡೆ ಸನ್ನೆ ಮಾಡುತ್ತಾರೆ ವಿನಃ ಗಂಡಿನ ಕಡೆಯಲ್ಲ ಯಾಕೆಂದರೆ, ನಮ್ಮ ಸಮಾಜವು ಪುರುಷ ಪ್ರಧಾನ ಸಮಾಜವಾಗಿದೆ. ತನ್ನನ್ನು ತಾನು ಕಾಳಜಿ ಮಾಡುತ್ತ, ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತ ಹೋಗುವುದು ಹೆಣ್ಣಿನ ಕರ್ತವ್ಯವೆಂದು ಹೇಳಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಹೋರಾಟಗಳು ನಡೆದರು ಮಹಿಳೆಯ ಮೇಲಾಗುತ್ತಿರುವ ಶೋಷಣೆಗಳು ಕಡಿಮೆಯಾಗುತ್ತಿಲ್ಲ. ಇನ್ನೊಬ್ಬರನ್ನು ಅತಿಯಾಗಿ ನಂಬುವುದು ಮತ್ತು ಆಗುತ್ತೀರುವ ತೊಂದರೆಗಳನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳದೆ ಇರುವುದರಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ಆದುದರಿಂದ ಮಹಿಳೆಯರು ತಮ್ಮ ಜವಬ್ದಾರಿಗಳ ಬಗ್ಗೆ ತಿಳಿದುಕೊಂಡು ತನ್ನನ್ನು ತಾನೇ ರಕ್ಷಿಸಿಕೊಳ್ಳುವುದು ಉತ್ತಮವೆಂದು ನುಡಿದರು. ಈ ಸಂದರ್ಭದಲ್ಲಿ ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕಿ ಅನ್ನಪೂರ್ಣ ಹಾಗೂ ಉಪನ್ಯಾಸಕಿ ದೀಪಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ಪೂರ್ತಿ ಶೆಟ್ಟಿ ಸ್ವಾಗತಿಸಿ, ವೀಣಾ ವಂದಿಸಿದರು. ಸಮೀಕ್ಷಾ ಎನ್. ದೇವಾಡಿಗ ನಿರೂಪಿಸಿದರು.