ಚಿಕ್ಕಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬೆಟ್ಟಕ್ಕೆ ಕಿಡಿಕೇಡಿಗಳು ಬೆಂಕಿ ಇಟ್ಟ ಪರಿಣಾಮ ಹಲವು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಇದರಿಂದಾಗಿ ಅರಣ್ಯದಲ್ಲಿದ್ದ ಚಿರತೆ, ಬೆಂಕಿಗೆ ಹೆದರಿ ಗ್ರಾಮವನ್ನು ಸೇರಿದ್ದು, ಶುಕ್ರವಾರ ರಾತ್ರಿ 9.30 ರ ಸಮಯದಲ್ಲಿ ಬೆಟ್ಟಕ್ಕೆ ಬೆಂಕಿ ಇಟ್ಟಿರುವುದು ತಿಳಿದು ಬಂದಿದೆ. ಅಲ್ಲದೆ ಬೆಂಕಿಯ ಕೆನ್ನಾಲಿಗೆ ತೀವ್ರವಾಗಿದ್ದ ಕಾರಣ ಮತ್ತು ಬೆಟ್ಟದಲ್ಲಿನ ಹುಲ್ಲು ಒಣಗಿರುವ ಕಾರಣ ತ್ವರಿತಗತಿಯಲ್ಲಿ ಬೆಂಕಿ ಇಡೀ ಬೆಟ್ಟ ವ್ಯಾಪಿಸಿದ್ದು, ಕಿಡಿಗೇಡಿಗಳ ಕೃತ್ಯದಿಂದ ಮರ ಗಿಡಗಳು ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ಚಿರತೆ ಬೆಂಕಿಗೆ ಹೆದರಿ ಮಾಕಳಿ ಗ್ರಾಮದ ಬಳಿ ಬೀಡು ಬಿಟ್ಟಿದೆ. ಅಲ್ಲದೇ ಶುಕ್ರವಾರ ರಾತ್ರಿ 9.45 ರ ಸಮಯದಲ್ಲಿ ಗ್ರಾಮಕ್ಕೆ ಬರದಂತೆ ಗ್ರಾಮಸ್ಥರು ಕಾವಲು ಕಾದಿದ್ದಾರೆ. ಚಿರತೆ ಬಂಧನಕ್ಕೆ ಇಂದು ಕ್ರವiಕೈಗೊಳ್ಳಲು ಮಾಕಳಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ಮುಂದಾಗಿದ್ದಾರೆ.