Sunday, January 19, 2025
ಹೆಚ್ಚಿನ ಸುದ್ದಿ

ತೀರ್ಥಹಳ್ಳಿ ತಾಲೂಕಿನಲ್ಲಿ ಅಡಿಕೆ ನುಂಗಿದ ಒಂದು ವರ್ಷದ ಮಗುವಿನ ಸಾವು-ಕಹಳೆ ನ್ಯೂಸ್

ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆದ್ದೂರಿನಲ್ಲಿ ಒಂದು ವರ್ಷ ಒಂದು ತಿಂಗಳ ಮಗುವೊಂದು ಅಡಿಕೆ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದ ಧಾರುಣ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆದ್ದೂರು ನಿವಾಸಿಗಳಾದ ಸಂದೇಶ ಮತ್ತು ಪ್ರಿಯಾಂಕ ಇವರ 1 ವರ್ಷದ ಗಂಡು ಮಗು ಹರಿವಾಣ ತಟ್ಟೆಯಲ್ಲಿದ್ದ ಅಡಿಕೆಯನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು ಕರೋನಾ ಸಂದರ್ಭದಿಂದ ತನ್ನ ಹೆದ್ದೂರು ಮನೆಯಲ್ಲಿ ಮಗುವನ್ನು ಬಿಟ್ಟಿದ್ದರು. ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯವಂತ ಮಗು ಎಂದು ಪ್ರಥಮ ಬಹುಮಾನದ ಜೊತೆಗೆ ನಗದು ಪುರಸ್ಕಾರ ಪಡೆದಿತ್ತು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು