Sunday, January 19, 2025
ವಾಣಿಜ್ಯ

ಚಿನ್ನಾಭರಣ ಪ್ರೇಮಿಗಳಿಗೊಂದು ಸಿಹಿಸುದ್ದಿ ; ನಿಮ್ಮ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ `ವರುಷದ ಹರುಷ’ ಸಂಭ್ರಮಕ್ಕೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು : ಸ್ವರ್ಣೋದ್ಯಮದಲ್ಲಿ ಆರು ದಶಕಗಳ ಅಗಾಧ ಅನುಭವ ಹೊಂದಿ ಗ್ರಾಹಕರಿಗೆ ನಿಕಟವಾಗಿರುವ ಪ್ರತಿಷ್ಟಿತ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯಲ್ಲಿ `ವರುಷದ ಹರುಷ’ ಸಂಭ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಪುತ್ತೂರು, ಸುಳ್ಯ ಹಾಗೂ ಹಾಸನ ಈ 3 ಶೋರೂಂಗಳನ್ನು ಎಪ್ರಿಲ್ 2 ರಂದೇ ಆರಂಭ ಮಾಡಿದ ವಿಶೇಷವಾಗಿ `ವರುಷದ ಹರುಷ ಸಂಭ್ರಮ’ವನ್ನು ಗ್ರಾಹಕರೊಂದಿಗೆ ಈ ದಿನದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ಆಫರ್‍ಗಳೊಂದಿಗಿನ ಮಾರಾಟವನ್ನು ಸಂಸ್ಥೆ ಹಮ್ಮಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನೆ ನೆರವೇರಿಸಿದ ಕ್ಯಾಂಪೆÇ್ಕೀ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಮಾತನಾಡಿ, ವ್ಯಾಪಾರ ಸಂಸ್ಥೆಯೊಂದಕ್ಕೆ ದೇವರಂತಿರುವ ಗ್ರಾಹಕರ ವಿಶ್ವಾಸಗಳಿಸಿ ತೃಪ್ತಿಪಡಿಸುವುದು ದೊಡ್ಡ ಸವಾಲು. ಗುಣಮಟ್ಟಕ್ಕೆ ಪ್ರಾಧ್ಯಾನ್ಯತೆ ನೀಡಿ ಈ ನಿಟ್ಟಿನಲ್ಲಿ ಯಶಸ್ವಿಯಾಗಿರುವುದರಿಂದ ಜಿ. ಎಲ್. ಸಂಸ್ಥೆಯು ದಿನದಿಂದ ದಿನಕ್ಕೆ ಬೆಳೆಯುತ್ತಾ ಬಂದಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಧುನಿಕ ಜನ ಜೀವನಕ್ಕೆ ಪೂರಕವಾಗಿ ವ್ಯವಸ್ಥೆಗಳನ್ನು ಮಾಡಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಜಿ. ಎಲ್. ಸಂಸ್ಥೆಯವರಿಗೆ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸಿದರು. ಅಡಿಕೆಯೊಂದಿಗೆ ಆರ್ಥಿಕ ಸಮ್ಮಿಲನವನ್ನು ಹೊಂದಿರುವ ಕರಾವಳಿಯ ಜನತೆಯ ನಾಡಿಮಿಡಿತವನ್ನು ಅರ್ಥೈಸಿಕೊಂಡಿರುವ ಸಂಸ್ಥೆಯ ವ್ಯವಹಾರ ನಿರಂತರ ಬೆಳೆಯಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ, ರಾಜೇಶ್ವರಿ ಬಲರಾಮ ಆಚಾರ್ಯ, ಲೀಲಾವತಿ ಆಚಾರ್ಯ, ಸುಧನ್ವ ಆಚಾರ್ಯ, ಮೇಘ ಶಂಕರ್, ಜನರಲ್ ಮ್ಯಾನೇಜರ್ ಶಂಕರ್ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

ವಿಶೇಷ ಕೊಡುಗೆ :

ವರುಷದ ಹರುಷದ ಕೊಡುಗೆಯಾಗಿ ಗ್ರಾಹಕರಿಗೆ 10,000 ರೂ. ನಿಂದ 50,000 ರೂ. ವರೆಗಿನ ಖರೀದಿಗೆ ಸಿಲ್ವರ್ ಕಾರ್ಡ್, 50,000 ರೂ. ನಿಂದ 1 ಲಕ್ಷ ರೂ. ವರೆಗಿನ ಖರೀದಿಗೆ ಗೋಲ್ಡ್ ಕಾರ್ಡ್ ಹಾಗೂ 1 ಲಕ್ಷ ರೂ. ಮೇಲ್ಪಟ್ಟ ಖರೀದಿಗೆ ಡೈಮಂಡ್ ಕಾರ್ಡ್ ಪಡೆದು ಸ್ಕ್ರಾಚ್ ಮಾಡಿ ಸ್ಥಳದಲ್ಲೇ ಚಿನ್ನದ ನಾಣ್ಯ, ಬೆಳ್ಳಿನಾಣ್ಯ, ಮೊಬÉೈಲ್, ವಾಚ್, ಪವರ್ ಬ್ಯಾಂಕ್, ಡಿನ್ನರ್ ಸೆಟ್ ಮತ್ತು ಇನ್ನಿತರ ಬಹುಮಾನಗಳು ಹಾಗೂ ಬಂಪರ್ ಬಹುಮಾನವಾಗಿ ಎಲ್‍ಇಡಿ ಟಿವಿ ಗೆಲ್ಲುವ ಅವಕಾಶವಿದೆ. ಉದ್ಘಾಟನೆಯ ಸಂದರ್ಭದಲ್ಲಿ ಸಂಭ್ರಮದ ಪ್ರಥಮ ಗ್ರಾಹಕರಾದ ಸುನಿತಾ ನರಿಕೊಂಬು ಸ್ಕ್ರಾಚ್ ಕಾರ್ಡ್ ಪಡೆದು ಬೆಳ್ಳಿಯ ನಾಣ್ಯ ವಿಜೇತರಾದರು.

ವರುಷದ ಹರುಷದಲ್ಲಿ ಗ್ರಾಹಕರಿಗೆ ಹೊಸ ಶೈಲಿಯ ಡಬಲ್ ಶೇಡೆಡ್ ಆ್ಯಂಟಿಕ್ ಕಲೆಕ್ಷನ್‍ಗಳು, ಆಕರ್ಷಕ ಶೈಲಿಯ ಟೆಂಪಲ್, ಚಕ್ರಿ, ಗುಂಡು ಲೇಯರ್ ಆಭರಣಗಳು, ಇಂಡೋ ಇಟಾಲಿಯನ್, ಕಟ್ಟಿಂಗ್ ಗುಂಡು ಹಾಗೂ ಜೋಮಾಲೆ ಚೈನ್‍ಗಳು ಮಾತ್ರವಲ್ಲದೆ ಊರಿನ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ನಿತ್ಯ ಬಳಕೆಯ ಕರಿಮಣಿ ಸರಗಳು ವಿವಿಧ ತೂಕಗಳಲ್ಲಿ ಲಭ್ಯವಿದೆ.

ಬೃಹತ್ ಸಂಗ್ರಹ :

ಮೂಗುತಿಯಿಂದ ಹಿಡಿದು ಸೊಂಟದಪಟ್ಟಿಯವರೆಗೆ ಮದುಮಗಳ ಶೃಂಗಾರಾಭರಣಗಳ ಆಗಾಧ ಸಂಗ್ರಹ ಗ್ರಾಹಕರ ಆಯ್ಕೆಗಳನ್ನು ಸುಲಭಗೊಳಿಸಲಿದೆ. ಆಧುನಿಕ ಶೈಲಿಯ ಕಿಡ್ಸ್ ಹಾಗೂ ಜಂಟ್ಸ್ ಕಲೆಕ್ಷನ್‍ಗಳ ಬೃಹತ್ ಸಂಗ್ರಹ, ಬೆಳ್ಳಿ ವಿಭಾಗದಲ್ಲಿ ಕಲಾತ್ಮಕ ದೇವರ ಮೂರ್ತಿಗಳು, ದೇವರ ಶೃಂಗಾರಾಭರಣಗಳು, ಪೂಜಾ ಮಧುಪರ್ಕ ಸಾಮಾಗ್ರಿಗಳು, ಬೆಳ್ಳಿಯ ಉಡುಗೊರೆಗಳು ಯುವಜನತೆಗೆ ಆಕರ್ಷಕ ಹರಳುಗಳುಳ್ಳ ಬೆಳ್ಳಿ ಉಂಗುರ, ಓಲೆ, ನೆಕ್‍ಲೆಸ್, ಕೀ ಬಂಚ್, ಕಡಗ ಹಾಗೂ ಕಾಲುಚೈನ್‍ಗಳು ಲಭ್ಯವಿದೆ.

ವಿಶ್ವಾಸ, ಪರಿಶುದ್ದತೆ ಪರಂಪರೆÉ, ವಿನ್ಯಾಸ ಹಾಗೂ ಗ್ರಾಹಕÀ ಸೇವೆಗಳಿಗೆ ಜಿ. ಎಲ್. ಆಚಾರ್ಯ ಕರ್ನಾಟಕದಲ್ಲೇ ಮನೆ ಮಾತಾಗಿದೆ. ಗ್ರಾಹಕರಿಗೆ ಸಂತಸÀದಾಯಕ ಚಿನ್ನಾಭರಣ ಖರೀದಿಗೆಂದೇ ಜಿ. ಎಲ್. ವರುಷದ ಹರುಷ ಸಂಭ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.