Recent Posts

Sunday, April 13, 2025
ಹೆಚ್ಚಿನ ಸುದ್ದಿ

ಧಾರವಾಡದ ವೆಂಕಟಾಪುರ ಗ್ರಾಮದಲ್ಲಿ ಜಮೀನಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಬೆಂಕಿಗೆ ಆಹುತಿಯಾದ 640ಕ್ಕೂ ಹೆಚ್ಚು ಮಾವಿನ ಗಿಡಗಳು-ಕಹಳೆ ನ್ಯೂಸ್

ಧಾರವಾಡ : ಧಾರವಾಡದ ವೆಂಕಟಾಪುರ ಗ್ರಾಮದಲ್ಲಿ ಜಮೀನಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ 640ಕ್ಕೂ ಹೆಚ್ಚು ಮಾವಿನ ಗಿಡಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಒಣಗಿದ ಕಸಕ್ಕೆ ಬೆಂಕಿ ಹತ್ತಿಕೊಂಡಿದೆ. ಹಟೇಲಸಾಬ ಹಸನಸಾಬ ಮಮ್ಮಲೆದಿ ಎಂಬುವರ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಇವರ 15 ಎಕರೆ ಜಮೀನಿನಲ್ಲಿರುವ ಕಸಕ್ಕೆ ಹತ್ತಿಕೊಂಡ ಬೆಂಕಿ ನಂತರ ಜಮೀನಿಗೆ ಆವರಿಸಿಕೊಂಡಿದ್ದು, ಜಮೀನಿನಲ್ಲಿ ಬೆಳೆದ 640 ಮಾವಿನ ಗಿಡಗಳು ಬೆಂಕಿಗೆ ಆಹುತಿಯಾಗಿದೆ.

ಇನ್ನೂ ವಿಷಯ ತಿಳಿದ ಧಾರವಾಡದ ತೋಟಗಾರಿಕೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ತೆಗೆದುಕೊಂಡರು.

ಇನ್ನೂ ಬೆಂಕಿಗೆ ಪ್ರಮುಖ ಕಾರಣ ಏನು ಶಾರ್ಟ್ ಸಕ್ರ್ಯೂಟ್ ಅಥವಾ ಯಾರಾದರೂ ಬೆಂಕಿ ಹಚ್ಚಿದ್ದಾರ ಎಂಬ ಕುರಿತು ಪೊಲೀಸರು ತನಿಖೆ ಮಾಡತಾ ಇದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ