Recent Posts

Monday, January 20, 2025
ಹೆಚ್ಚಿನ ಸುದ್ದಿ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿ, 4 ವರ್ಷ ಜೈಲುವಾಸದ ನಂತರ ಬಿಡುಗಡೆಯಾದ ವಿ.ಕೆ ಶಶಿಕಲಾ ತಮಿಳುನಾಡಿನತ್ತ ಪ್ರಯಾಣ-ಕಹಳೆ ನ್ಯೂಸ್

ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕಾಗಿ 4 ವರ್ಷಗಳಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಐಎಡಿಎಂಕೆ ಪಕ್ಷದ ಉಚ್ಚಾಟಿತ ನಾಯಕಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಆಪ್ತೆ ವಿ.ಕೆ. ಶಶಿಕಲಾ ಇಂದು ತಮಿಳುನಾಡಿಗೆ ತೆರಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರಣದಿಂದಾಗಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ತಮಿಳುನಾಡು-ಕರ್ನಾಟಕ ಗಡಿಯಲ್ಲಿ ಸುಮಾರು 1,500 ಪೊಲೀಸರನ್ನು ನಿಯೋಜಿಸಲಾಗಿದೆ. ಜನವರಿ 27 ರಂದು ಜೈಲಿನಿಂದ ಬಿಡುಗಡೆಗೊಂಡಿದ್ದ ಶಶಿಕಲಾ ಅವರಿಗೆ ಕೊರೊನಾ ಸೋಂಕು ತಗುಲಿದ್ದರಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದರ ನಂತರ ಅವರು ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ರೆಸಾರ್ಟ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದು, ಇದೀಗ ದೇವನಹಳ್ಳಿಯ ರೆಸಾರ್ಟ್‍ನಿಂದ ಶಶಿಕಲಾ ಅವರು ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಹೊಸೂರಿಗೆ ಬೆಳಿಗ್ಗೆ 9 ಗಂಟೆಗೆ ತಲುಪಿದ್ದಾರೆ ಎನ್ನಲಾಗಿದೆ. ಅವರಿಗೆ ಬೆಂಗಳೂರಿನಿಂದ ಚೆನ್ನೈವರೆಗಿನ ಅವರ ಬೆಂಬಲಿಗರು 32 ಸ್ಥಳಗಳಲ್ಲಿ ಸ್ವಾಗತ ಕೋರಲಿದ್ದು, ಟಿ. ನಗರದಲ್ಲಿರುವ ಎಂಜಿಆರ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಶಶಿಕಲಾ ತಮ್ಮ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ. ಹಾಗೆಯೇ ತಮಿಳುನಾಡಿಗೆ ವಾಪಸಾಗುತ್ತಿರುವ ಶಶಿಕಲಾ ಅವರನ್ನು ಸ್ವಾಗತಿಸಲು ಅವರ ಬೆಂಬಲಿಗರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಗೆ ಆಗಮಿಸಿ, ಬೆಂಗಳೂರಿನಿಂದ ಅವರನ್ನು ರ್ಯಾಲಿ ಮುಖಾಂತರ ಕರೆದೊಯ್ಯುವುದಾಗಿ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ಪೊಲೀಸರು ಕೊರೊನಾ ನಿಯಮ ಮತ್ತು ಕಾನೂನು ಸುವ್ಯವಸ್ಥೆ ಕಾರಣ ನೀಡಿ ಅದಕ್ಕೆ ಅನುಮತಿ ನಿರಾಕರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು