Recent Posts

Monday, January 20, 2025
ಪುತ್ತೂರು

Breaking News : ಪುತ್ತೂರಿನ ಖಾಸಗೀ ಸ್ಥಳದಲ್ಲಿ ” ಡಿಂಗ್ ಡಾಂಗ್ ಪಾರ್ಟಿ ” ; ಎಣ್ಣೆ ನಶೆಯಲ್ಲಿ ಜಾರ್ಖಾಂಡ್ ಯುವತಿಗೆ ಲೈಂಗಿಕ ಕಿರುಕುಳ ಆರೋಪ – ಯುವಕ, ಯುವತಿಯರ ನಶೆ ಇಳಿಸಿದ ಪುತ್ತೂರು ಪೋಲೀಸರು – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಖಾಸಗಿ ಒಡೆತನಕ್ಕೆ ಒಳಪಟ್ಟ ಜಾಗವೊಂದರಲ್ಲಿ ಮಂಗಳೂರು ಮೂಲದ ಸರಿಸುಮಾರು 14 ರಿಂದ 16 ಸ್ನೇಹಿತ ಯುವಕ-ಯುವತಿಯರು ಎಣ್ಣೆ ಪಾರ್ಟಿ ನಡೆಸುತ್ತಿದ್ದ ವೇಳೆ ಜಾರ್ಖಾಂಡ್ ಮೂಲದ ಯುವತಿಯ ಮೇಲೆ ಸ್ನೇಹಿತರಲ್ಲೊಬ್ಬನಾದ ಮಂಗಳೂರಿನ ಕ್ರಿಶ್ಚಿಯನ್ ಯುವಕ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಯುವತಿ ಪುತ್ತೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ರಿ ದೂರಿನ ಅನ್ವಯ ಪುತ್ತೂರು ಮಹಿಳಾ ಠಾಣಾ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಎಸ್.ಐ ಸೇಸಮ್ಮ ಸೇರಿದಂತೆ ಸಿಬ್ಬಂದಿಗಳು ಡಿ.ವೈ.ಎಸ್.ಪಿ ಡಾ.ಗಾನ ಪಿ ನಿರ್ದೇಶನದಂತೆ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಅಲ್ಲದೆ ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ಸಂಸ್ಥೆಯ ಅಧೀನಕ್ಕೊಳಪಟ್ಟ ನಿಗೂಢ ಪ್ರದೇಶದ ಒಂಟಿ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಪಾರ್ಟಿಯಲ್ಲಿ ಭಾಗವಹಿಸಿದ ಎಲ್ಲರನ್ನು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದು ಸತ್ಯ-ಅಸತ್ಯತೆ ಹೊರಬರಬೇಕಾಗಿದೆ. ಜಿಲ್ಲಾ ವರಿಷ್ಟಾಧಿಕಾರಿಗಳು ಪುತ್ತೂರಿಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು