Wednesday, January 22, 2025
ಪುತ್ತೂರು

ಸಾಹಿತ್ಯ ಮಂಟಪವೆನ್ನುವುದು ಹೊಸತನ ತರುವ ಕಾರ್ಯಕ್ರಮ ; ಡಾ. ಮನಮೋಹನ ಎಂ.-ಕಹಳೆ ನ್ಯೂಸ್

ಪುತ್ತೂರು : ಬದುಕಿನಲ್ಲಿ ಸಾಹಸ ಪ್ರವೃತ್ತಿಯನ್ನು ಬೆಳೆಸಿಕೊಂಡು, ಹೊಸ ಪ್ರಯತ್ನ ಮಾಡಬೇಕು. ಆಗ ನಮ್ಮ ಕೆಲಸ ಪರಿಪೂರ್ಣವಾಗುತ್ತದೆ. ನಾವು ಮುಂದೆ ಏನಾಗಬೇಕು ಎಂದು ನಮಗೆ ತಿಳಿದಿರಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಅದು ನಮ್ಮ ಗೌರವವನ್ನು ಎತ್ತಿ ತೋರುತ್ತದೆ. ನಾಳೆಯ ಚಿಂತೆ ಬಿಟ್ಟು ಇಂದಿನ ಕೆಲಸದಲ್ಲಿ ತೊಡಗುವುದು ಉತ್ತಮ. ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ ಹೇಳಿದರು. ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ತೃತಿಯ ಬಿಎ ಕನ್ನಡ ಐಚ್ಚಿಕ ವಿದ್ಯಾರ್ಥಿಗಳು ಆಯೋಜಿಸುವ ‘ಸಾಹಿತ್ಯ ಮಂಟಪ’ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಶುಕ್ರವಾರ ಅವರು ಮಾತನಾಡಿದ್ದರು. ಸಾಹಿತ್ಯ ಮಂಟಪವೆಂಬುದು ಹೊಸತನವನ್ನು ತರುವ ಕಾರ್ಯಕ್ರಮ . ಅದರಲ್ಲಿ ಸ್ವರಚಿತ ಕಥೆ-ಕವನಗಳನ್ನು ಓದುವ ಮೂಲಕ ಅನುಭವಗಳು ಬೆಳೆಯುತ್ತದೆ. ಆ ಅನುಭವವೆಂಬುದು ಮಾನವೀಯತೆಯನ್ನು ಮೆರೆಸುವುದು ಸತ್ಯ. ನಾವು ಲೇಖನಗಳನ್ನು ಬರೆದ ಮೇಲೆ ಓದಬೇಕು ಆಗ ಅದರಲ್ಲಿನ ತಪ್ಪು ವಿಷಯಗಳು ನಮಗೆ ಸ್ವಷ್ಟವಾಗಿ ತಿಳಿಯುತ್ತದೆ ಎಂದು ನುಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಂಘದ ಸಂಯೋಜಕಿ ಡಾ. ಗೀತಾ ಕುಮಾರಿ ಟಿ., ಕವನ ವಾಚಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಯುವ ಕವಿಗಳಾದ ಕೀರ್ತಿ ಸಿ., ಶುಭ್ರ ಪುತ್ರಕಳ, ಮಾನಸ ಕೆ.ಡಿ., ವಿಭಶ್ರೀ, ಚೆನ್ನಬಸವ ಸ್ವರಚಿತ ಕವನ ಮತ್ತು ಲೇಖನವನ್ನು ವಾಚಿಸಿದರು. ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್.ಜಿ. ಶ್ರೀಧರ್, ಕನ್ನಡ ಸಂಘದ ಕಾರ್ಯದರ್ಶಿ ಚೆನ್ನಬಸವ ಮತ್ತು ಜತೆ ಕಾರ್ಯದರ್ಶಿ ಶಶಿಧರ್ ನಾಯ್ಕ್ ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಸೌಮ್ಯ ಮತ್ತು ದೀಪ ಪ್ರಾರ್ಥಿಸಿದರು. ತೃತೀಯ ಬಿಎ ಐಚ್ಚಿಕ ಕನ್ನಡ ವಿದ್ಯಾರ್ಥಿನಿ ಪೂಜಶ್ರೀ ಸ್ವಾಗತಿಸಿ, ರಮ್ಯಶ್ರೀ ಕೆ.ಟಿ. ವಂದಿಸಿದರು. ವಿದ್ಯಾರ್ಥಿನಿ ದೀಪಿಕಾ ಪಿ. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು